ವಡಗೇರಾ: ‘ಕಾನೂನು ಪದವಿ ಓದಲು ಎಲ್ಲರೂ ಆಸಕ್ತಿ ಇದೆ. ಆದರೆ ಕಪ್ಪು ಕೋಟು ಧರಿಸಿ ನ್ಯಾಯಾಲಯದಲ್ಲಿ ಸೂಕ್ತ ಸಾಕ್ಷಿಗಳನ್ನು ಕಲೆ ಹಾಕಿ ಕೇಸ್ ವಾದಿಸುವುದು ಕಷ್ಟದ ಕೆಲಸ’ ಎಂದು ಜವಾಹರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಇಕ್ಬಾಲ್ ಕಾಸಿಂ ಹೇಳಿದರು.
ತಾಲ್ಲೂಕಿನ ಕುಮನೂರು ಗ್ರಾಮದಲ್ಲಿ ಕಾನೂನು ಪದವಿ ಪಡೆದ ಮೊದಲ ಯುವಕ ಬಾಬು ಎಸ್.ಪೊಲೀಸ್ ಪಟೇಲ್ ಅವರಿಗೆ ಗ್ರಾಮಸ್ಥರಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಗ್ರಾಮೀಣ ಭಾಗದ ಯುವಕರು ಕಾನೂನು ಪದವಿ ಓದಲು ಹೆಚ್ಚಿನ ಆಸಕ್ತಿ ತೋರಿಸಬೇಕು. ಕೆಲವೊಬ್ಬರು ಕಾನೂನು ಪದವಿ ಪಡೆದ ಮೇಲೆ ಈ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಮುಂದುವರಿಸಲು ಬಯಸದಿರುವುದು ಆತಂಕಕಾರಿ ವಿಷಯವಾಗಿದೆ’ ಎಂದರು.
ಸನ್ಮಾನ ಸ್ವೀಕರಿಸಿದ ಬಾಬು ಎಸ್. ಪೊಲೀಸ್‌ಪಟೇಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಮುದಕ್ಕಪ್ಪ, ಫಯಾಜ್ ಸಾಬ್ ಖುರೇಶಿ, ಮಲ್ಲಿಕಾರ್ಜುನ, ಕುಮಲಯ್ಯ, ಮರಿಲಿಂಗಪ್ಪ, ಚಾಂದ್ ಪಟೇಲ್, ಸಲೀಂಪಾಷ್, ಕುಮಲಪ್ಪ, ಮಕದಂ ಸಾಬ್, ಲತೀಪ್ ಸಾಬ್, ಮಹ್ಮದ್ ಮೊಸಿನ್ ಸಾಬ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.