ADVERTISEMENT

‘ಮಳಖೇಡದಲ್ಲೇ ಮೂಲ ವೃಂದಾವನ’

ಕೆಂಭಾವಿ: ವಿಪ್ರ ಸಮಾಜದಿಂದ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:10 IST
Last Updated 7 ಜುಲೈ 2022, 4:10 IST
ಕೆಂಭಾವಿಯಲ್ಲಿ ವಿಪ್ರ ಸಮಾಜದ ವತಿಯಿಂದ ಮೌನ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು
ಕೆಂಭಾವಿಯಲ್ಲಿ ವಿಪ್ರ ಸಮಾಜದ ವತಿಯಿಂದ ಮೌನ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು   

ಕೆಂಭಾವಿ: ಮಳಖೇಡದ ಶ್ರೀಜಯತೀರ್ಥರ ಮೂಲ ವೃಂದಾವನ ಕುರಿತು ರಾಯರ ಮಠದವರು ಮಾಡುತ್ತಿರುವ ಅಪಪ್ರಚಾರ ವಿರೋಧಿಸಿ ಬುಧವಾರ ವಿಪ್ರ ಬಳಗದ ವತಿಯಿಂದ ಮೌನ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ವಾಮನರಾವ ದೇಶಪಾಂಡೆ, ‘600 ವರ್ಷಗಳ ಇತಿಹಾಸವಿರುವ ಉತ್ತರಾದಿ ಮಠದ ಮೂಲ ಪುರುಷ ಶ್ರೀಜಯತೀರ್ಥರ ಮೂಲ ವೃಂದಾವನದ ಬಗ್ಗೆ ಈಚೆಗೆ ರಾಯರ ಮಠದವರ ಹೇಳಿಕೆ ಸುಳ್ಳು. ಅನೇಕರು ಜಯತೀರ್ಥರ ವೃಂದಾವನ ಮಳಖೇಡದಲ್ಲಿಯೇ ಇದೆ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಆದರೂ ತಮ್ಮ ಖಾಸಗಿ ಒಡೆತನದ ಪ್ರಭಾವ ಸಾಧಿಸಲು ಮುಂದಾಗಿರುವುದು ಹಾಸ್ಯಾಸ್ಪದ ಮತ್ತು ಅತಿರೇಕ. ಸರ್ಕಾರ ಈ ಬಗ್ಗೆ ವಿವರಣೆ ಪಡೆದು ನೂರಾರು ವರ್ಷಗಳ ಇತಿಹಾಸವುಳ್ಳ ಮಳಖೇಡದ ಜಯತೀರ್ಥರ ವೃಂದಾವನ್ನು ಮೂಲ ವೃಂದಾವನ ಎಂದು ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ ಮಾತನಾಡಿ, ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಮಳಖೇಡದಲ್ಲಿ ಶ್ರೀ ಜಯತೀರ್ಥರ ವೃಂದಾವನ ಇದೆ ಎಂದು ಸರ್ಕಾರದ ಗೆಜೆಟ್‍ನಲ್ಲಿ ಮತ್ತು ಸರ್ಕಾರ ಹೊಂದಿರುವ ಅಧಿಕೃತ ಪುಸ್ತಕಗಳಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದರು.

ADVERTISEMENT

ಗುರುರಾಜ ಕುಲಕರ್ಣಿ, ಹಳ್ಳೇರಾವ ಕುಲಕರ್ಣಿ, ಸುರೇಖಾ ಕುಲಕರ್ಣಿ ಮಾತನಾಡಿದರು.

ಉತ್ತರಾದಿಮಠ ಬೀದಿಯಲ್ಲಿ ಮೌನ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಮಲ್ಲಿಕಾರ್ಜುನ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಪ್ರಹ್ಲಾದಾಚಾರ್ಯ ಜೋಷಿ, ತಿರುಮಲಾಚಾರ್ಯ ಜೋಷಿ, ಬಾಳಕೃಷ್ಣರಾವ ಕುಲಕರ್ಣಿ, ಮೋಹನರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ಹಳ್ಳೆಪ್ಪಾಚಾರ್ಯ ಚನ್ನೂರ, ಕೃಷ್ಣಾಜಿ ಕುಲಕರ್ಣಿ, ವೆಂಕಟೇಶ ನಾಡಿಗೇರ, ಗುಂಡಭಟ್ಟ ಜೋಷಿ, ಪುರಸಭೆ ಮಾಜಿ ಸದಸ್ಯ ರಾಘವೇಂದ್ರ ದೇಶಪಾಂಡೆ, ವಾದಿರಾಜ ಕುಲಕರ್ಣಿ, ಆನಂದ ತಿಳಗೂಳ, ಪುರಸಭೆ ಸದಸ್ಯೆ ರಮ್ಯಾ ದೇಶಪಾಂಡೆ, ಕಮಲಾಬಾಯಿ ಕುಲಕರ್ಣಿ, ಸುಮಂಗಲಾ, ಚಂದ್ರಕಲಾ ಕುಲಕರ್ಣಿ, ಭೂದೇವಿ ಚನ್ನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.