ADVERTISEMENT

ಜಿಂದಾಲ್‌ಗೆ  ಒಂದು ಗುಂಟೆಯೂ ಭೂಮಿ ನೀಡಬಾರದು: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 8:27 IST
Last Updated 9 ಜೂನ್ 2019, 8:27 IST
   

ಯಾದಗಿರಿ: ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಒಂದು ಗುಂಟೆ ಭೂಮಿಯು ನೀಡಬಾರದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಿಂದಾಲ್‌ಗೆ ಭೂಮಿ ನೀಡುವ ಮೂಲಕ ರಾಜ್ಯವನ್ನು ಹರಾಜು ಮಾಡಲು ಹೊರಟಿದೆ. ಈ ಹಿಂದೆ ಸಾಕಷ್ಟು ಭೂಮಿಯನ್ನು ನೀಡಲಾಗಿದೆ. ಈಗ ಮತ್ತೆ ಭೂಮಿ ಪರಭಾರೆ ಮಾಡುವುದನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ಸಂಪುಟ ತೀರ್ಮಾನ ಭೂಮಿ ನೀಡುವ ವಿಚಾರ ಹಿಂತೆಗೆದುಕೊಳ್ಳಬೇಕು. ಬರಗಾಲದ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಶೀಘ್ರ ಧಾವಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಬರ ನಿರ್ವಹಣೆ ಕಾಮಗಾರಿಗೆ ಶೀಘ್ರ ತಲಾ ವಿಧಾನಸಭೆಗೆ ಕ್ಷೇತ್ರವಾರು ಮೂರು ಕೋಟಿ ಹಣ ಬಿಡುಗಡೆ ಮಾಡಬೇಕು. ಸಮರ್ಪಕವಾಗಿ ಕೇಂದ್ರ ಸರ್ಕಾರದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.