ADVERTISEMENT

ಯಾದಗಿರಿ: ಕಕ್ಕೇರಾ ಪಟ್ಟಣದಲ್ಲಿ 95.4 ಎಂಎಂ ದಾಖಲೆ ಮಳೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 8:56 IST
Last Updated 17 ಸೆಪ್ಟೆಂಬರ್ 2020, 8:56 IST
ಯಾದಗಿರಿ ಜಿಲ್ಲೆ ಪೀರಗಾರದೊಡ್ಡಿಯ ಹಳ್ಳ ತುಂಬಿ ಹರಿದು, ಸಮೀಪದ ಜಮೀನುಗಳಿಗೆ ನೀರು ನುಗ್ಗಿದೆ.
ಯಾದಗಿರಿ ಜಿಲ್ಲೆ ಪೀರಗಾರದೊಡ್ಡಿಯ ಹಳ್ಳ ತುಂಬಿ ಹರಿದು, ಸಮೀಪದ ಜಮೀನುಗಳಿಗೆ ನೀರು ನುಗ್ಗಿದೆ.   

ಕಕ್ಕೇರಾ (ಯಾದಗಿರಿ ಜಿಲ್ಲೆ): ಪಟ್ಟಣದಲ್ಲಿ ಬುಧವಾರ ಮಧ್ಯರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೆ 95.4 ಎಂಎಂ ದಾಖಲೆ ಮಳೆಯಾಗಿದೆ.

ಭಾರೀ ಮಳೆಯಿಂದ ವಲಯದ ನಿಂಗಾಪುರ ಗ್ರಾಮದಲ್ಲಿ 6 ಮನೆಗಳು ಧರೆಗುರುಳಿವೆ. ಹುಣಸಿಹೊಳೆ ಗ್ರಾಮದಲ್ಲಿ 5 ಮನೆಗಳ ಪೈಕಿ 3 ಮನೆಗಳ ಗೋಡೆಗಳು ಧರೆಗುರುಳಿದರೆ, 2 ಮನೆಗಳ ಮೇಲ್ಛಾವಣಿ ನೆಲಕಪ್ಪಳಿಸಿವೆ.

ಸಮೀಪದ‌‌ ಪೀರಗಾರದೊಡ್ಡಿಯ ಹಳ್ಳ ಸಂಪೂರ್ಣವಾಗಿ ತುಂಬಿ ಹರಿದ‌ ಪರಿಣಾಮ ಸೇತುವೆ ಮೇಲೆ ರೈತರು ಹಾಗೂ ಸಾರ್ವಜನಿಕರು ನೀರಿನ ರಭಸ ಕಡಿಮೆಯಾಗುವರೆಗೂ ಸಂಚರಿಸಲಾಗಲಿಲ್ಲ. ಹಳ್ಳದ ಸಮೀಪದ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಬೆಳೆಗಳು ಜಲಾವೃತಗೊಂಡಿವೆ. ನೂರಾರು ಎಕರೆ ಭತ್ತದ ಬೆಳೆ ನೀರು ಪಾಲಾಗಿದೆ. ಸೇತುವೆ ತಡೆಗೋಡೆ ಒಡೆದಿದ್ದು, ಅಪಾಯದ ಸ್ಥಿತಿಯಲ್ಲಿದೆ.

ADVERTISEMENT

‘ಪಟ್ಟಣ ವ್ಯಾಪ್ತಿಯಲ್ಲಿ 95.4 ದಾಖಲೆ ಮಳೆಯಾಗಿದ್ದು, ಮನೆಹಾನಿ ಹಾಗೂ ಜಮೀನುಗಳಲ್ಲಿ ನೀರು ನುಗ್ಗಿದೆ. ಸರ್ವೆ ಕಾರ್ಯ ಮಾಡುತ್ತಿದ್ದು, ಮೇಲಧಿಕಾರಿಗಳಿಗೆ ತಲುಪಿಸಲಾಗುವುದು’ ಎಂದು ಗ್ರಾಮ ಲೆಕ್ಕಾಧಿಕಾರಿ ಸಂತೋಷ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.