ADVERTISEMENT

ಕಕ್ಕೇರಾ: ಸೋಮನಾಥ ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:07 IST
Last Updated 24 ಜನವರಿ 2026, 6:07 IST
ಸೋಮನಾಥ ದೇವರ ರಥಗಳ ಕಳಸಾವರೋಹಣ ಪೂಜಾ ಕಾರ್ಯಕ್ರಮಗಳು ಜರುಗಿದವು 
ಸೋಮನಾಥ ದೇವರ ರಥಗಳ ಕಳಸಾವರೋಹಣ ಪೂಜಾ ಕಾರ್ಯಕ್ರಮಗಳು ಜರುಗಿದವು    

ಕಕ್ಕೇರಾ: ಪಟ್ಟಣದ ಆರಾದ್ಯದೈವ ಸೌರಾಷ್ಟ್ರ ಅಧಿಪತಿ ಸೋಮನಾಥ ಜಾತೆ ಅಂಗವಾಗಿ ಜ.15ರಂದು ರಥ ಹಾಗೂ ಜ.18ರಂದು ಜರುಗಿದ ಉಚ್ಛಾಯ ಕಳಸಗಳು ಶುಕ್ರವಾರ ಸಂಜೆ ಭಕ್ತರ ಸಮ್ಮುಖದಲ್ಲಿ ಕಳಸಾವರೋಹಣ ಜರುಗುವುದರೊಂದಿಗೆ ಸೋಮನಾಥ ದೇವರ ಅದ್ದೂರಿಯಾಗಿ ಜಾತ್ರೆ ಸಂಪನ್ನಗೊಂಡಿತು.

ನಂದಣ್ಣಪ್ಪ ಪೂಜಾರಿ ಶ್ರೀಗಳ ಸಾನ್ನಿಧ್ಯದಲ್ಲಿ ಸೋಮನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ರಥೋತ್ಸವಗಳು ಜರುಗಿದ ಸ್ಥಳಕ್ಕೆ ಆಗಮಿಸಿ ರಥಗಳಿಗೆ ಪೂಜೆ ಸಲ್ಲಿಸಿ ಕಳಸಾವರೋಹಣಕ್ಕೆ ಸೇವಕರಿಗೆ ಸೂಚಿಸಿದರು. ಕೆಳಗಿಳಿದ ಕಳಸಗಳಿಗೆ ಪೂಜೆ ಸಲ್ಲಿಸಿ ದೇವರ ಪಾದಗಟ್ಟೆಗೆ ಪೂಜೆ ಸಲ್ಲಿಸಲಾಯಿತು.

ಕಳೆದ ಜ.13ರಂದು ದೇವರ ಗರ್ಭಗುಡಿಗೆ ಕಳಸಗಳ ಆಗಮನ, ಜ.14ರಂದು ದೇವರ ಗಂಗಸ್ಥಳ ಹಾಗೂ ದೇವರ ಹೇಳಿಕೆ, ಜ.15ರಂದು ವೈಭವದ ರಥೋತ್ಸವ, ಜ.18ರಂದು ಉಚ್ಛಾಯ & ಗವಾಯಿ ಬಸಣ್ಣ ಗುರಿಕಾ ಸಂಗೀತ ರಸಮಂಜರಿ, ಜ.19ರಂದು ಕುದುರೆಗಳ ಕುಣಿತ, ಜ.17ರಿಂದ 22ರವರೆಗೆ ಜಾನುವಾರಗಳ ಜಾತ್ರೆ, ಸೇರಿದಂತೆ ವಿಶೇಷ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ಜರುಗಿದವು.

ADVERTISEMENT

ಈ ವೇಳೆ ಕಂದಾಯ ಇಲಾಖೆ, ಪುರಸಭೆ ಸಿಬ್ಬಂದಿ, ಪೋಲಿಸ್ ಇಲಾಖೆ ಕಾರ್ಯವೈಖರಿಯ ಬಗ್ಗೆ ನಂದಣ್ಣಪ್ಪ ಪೂಜಾರಿ ಶ್ರೀಗಳು ಶ್ಲಾಘೀಸಿದರು.

ಪರಮಣ್ಣ ಪೂಜಾರಿ, ಅಯ್ಯಣ್ಣ ಪೂಜಾರಿ, ಹಣಮಂತ್ರಾಯ ಜಾಹಗೀರದಾರ್, ಗುಂಡಪ್ಪ ಸೋಲಾಪುರ, ರಾಜೂ ಹವಾಲ್ದಾರ್, ಅಮರಪ್ಪ ಮಂಡೇರ್, ಬಸಯ್ಯಸ್ವಾಮಿ, ಪರಮಣ್ಣ ಕಮತಗಿ, ಪರಮಣ್ಣ ತೇರಿನ್, ಲಕ್ಷ್ಮಣ ಲಿಂಗದಳ್ಳಿ, ಸೋಮಣ್ಣ ತೇರಿನ್, ಚಂದ್ರು ವಜ್ಜಲ್, ಪರಮಣ್ಣ ಜಂಪಾ, ಅಯ್ಯಣ್ಣ ಬೋಯಿ, ಮಹಿಬೂಬ ಸುರಪುರ, ಸೇರಿದಂತೆ ಪಟ್ಟಣದ ಗಣ್ಯಮಾನ್ಯರು ಹಾಗೂ ದೇವರ ಸೇವಕರು, ಭಕ್ತರು ಹಾಜರಿದ್ದರು.

ಬೆಳಿಗ್ಗೆಯಿಂದ ಭಕ್ತರು ಜಾತ್ರೆಗೆ ಆಗಮಿಸಿ ದೇವರ ದರ್ಶನ ಹಾಗೂ ರಥಗಳಿಗೆ ನಮಸ್ಕರಿಸಿ ಪುನೀತರಾದರು. ಬಳೆಅಂಗಡಿ, ಕಬ್ಬು ಖರೀದಿ, ಮಿಠಾಯಿ, ಭಜಿ, ಪೋಟೊ ಸ್ಟುಡಿಯೋ ವ್ಯಾಪಾರ ನಡೆದಿದೆ ಎಂದು ಸೋಮಶೇಖರ ಗಿಟಗಿ, ಕರೀಮಸಾಬ ನಾಶಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.