ADVERTISEMENT

ಖಾನಳ್ಳಿ; ಮಕ್ಕಳ ಕಲಿಕಾ ಹಬ್ಬ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 6:08 IST
Last Updated 21 ಜನವರಿ 2023, 6:08 IST
ಯರಗೋಳ ಸಮೀಪದ ಖಾನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳ ಪ್ರದರ್ಶನವನ್ನು ಶಿಕ್ಷಕರು, ಅಧಿಕಾರಿಗಳು ವಿಕ್ಷೀಸಿದರು
ಯರಗೋಳ ಸಮೀಪದ ಖಾನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳ ಪ್ರದರ್ಶನವನ್ನು ಶಿಕ್ಷಕರು, ಅಧಿಕಾರಿಗಳು ವಿಕ್ಷೀಸಿದರು   

ಯರಗೋಳ: ಸಮೀಪದ ಖಾನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳಿಂದ ಹಲವಾರು ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಚಟುವಟಿಕೆಗಳ ಪ್ರದರ್ಶನ ನಡೆಯಿತು.

ಕಲಿಕಾ ಹಬ್ಬದ ನೊಡಲ್ ಅಧಿಕಾರಿ ವಿದ್ಯಾ ಸಜ್ಜನಶಟ್ಟರ ಸೇರಿದಂತೆ ಅಲ್ಲಿಪೂರ ಕ್ಲಸ್ಟರ್ ಕಲಿಕಾ ಹಬ್ಬದ ಪೂರ್ವ ಭಾವಿ ಸಭೆಗೆ ಸೇರಿದ್ದ ಕ್ಲಸ್ಟರ್ ಶಾಲಾ ಮುಖ್ಯ ಶಿಕ್ಷಕರು ಮಕ್ಕಳ ಕಲಿಕಾ ಚಟುವಟಿಕೆಗಳನ್ನು ವಿಕ್ಷೀಸಿದರು.

ಕಲಿಕಾ ಹಬ್ಬದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಿದಂತೆ ಜ.30 ಮತ್ತು 31ರಂದು ಅಲ್ಲಿಪೂರ ಕ್ಲಸ್ಟರ್ ಕಲಿಕಾ ಹಬ್ಬ ಆಚರಿಸಲು ತೀರ್ಮಾನಿಸಲಾಯಿತು.

ADVERTISEMENT

ಮುಖ್ಯ ಶಿಕ್ಷಕಿ ಹಣಮಂತಿ, ಮೌನೇಶ್ವರಿ, ಯಲ್ಲಪ್ಪ, ಮುನೀರ್ ಅಹ್ಮದ್, ಕನಕಪ್ಪ, ಬಾಲಮ್ಮ, ಪ್ರೇಮಲತಾ, ಸಿದ್ದಲಿಂಗಪ್ಪ ಕೋರಿ, ಅಯ್ಯಣ್ಣ ಬಡಿಗೇರ, ನಿಂಗಪ್ಪ, ಶಿಕ್ಷಕರಾದ ಜೈಸುಧಾ, ಶರಣಮ್ಮ, ಚಂದ್ರಭಾಗಾ, ಸೋನಾಬಾಯಿ, ಈರಣ್ಣ ಭಜಂತ್ರಿ ಶಿಕ್ಷಣ ಸಂಯೋಜಕ ಶ್ರೀನಿವಾಸಲು ಕರ್ಲಿ, ಸಮೂಹ ಸಂಪನ್ಮೂಲ ವ್ಯಕ್ತಿ ಬಂಗಾರಪ್ಪ ಸೇರಿದಂತೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.