ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ನಾಡಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಉಪ ತಹಶೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ ಸೇರಿದಂತೆ ಸಿಬ್ಬಂದಿಗಳು ಇದ್ದರು.
ಹುಣಸಗಿ: ನಿಜಾಮರ ವಿರುದ್ದ ಹೋರಾಡಿದ ಕಲ್ಯಾಣ ಭಾಗವನ್ನು ವಿಮೋಚನೆಗೊಳಿಸಿದ ಮಹನೀಯರ ಜೀವನ ಚರಿತ್ರೆಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸುವಂತೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ ಹೇಳಿದರು.
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ನಾಡ ಕಚೇರಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮಾತನಾಡಿದರು.
‘ಕಲ್ಯಾಣ ಕರ್ನಾಟಕ ಪ್ರದೇಶವನ್ನು ನಿಜಾಮ ಆಡಳಿತದಿಂದ ಮುಕ್ತಿ ನೀಡಲು ತಮ್ಮ ಪ್ರಾಣ ಪಣವಾಗಿಟ್ಟು ಹೋರಾಟ ಮಾಡಿದ ಮಹನೀಯರ ಹೋರಾಟ ಹಾಗೂ ಬದುಕಿನ ಕುರಿತು ಇಂದಿನ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕಿದೆ’ ಎಂದರು.
ಉಪ ತಹಶೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ಕಂದಾಯ ನಿರೀಕ್ಷಕ ಶಾಂತಗೌಡ, ಅಂಬ್ರೇಶ, ಸುರೇಶ, ಬಾಗಣ್ಣ, ದೀಪ್ತಿ, ಅಮರೀಶ್, ದೇವು, ಶರಣು, ಯಮನಪ್ಪ, ಇಕ್ಬಾಲ್, ಶಿವಶಂಕರ, ಪರಶುರಾಮ, ಸದ್ದಾಂ ಇದ್ದರು.
ರಾಜನಕೋಳೂರು: ರಾಜನಕೋಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸಲಾಯಿತು.
ಆಯುಷ್ ವೈದ್ಯ ಮೋಹನ ಕೋರಿ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ಸೇನಾನಿ ವೀರೂಪಾಕ್ಷಪ್ಪಗೌಡ ಪಾಟೀಲ ಅವರ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಡಾ.ಮಂಜುನಾಥ ಚಂದಾ, ಗೀತಾ, ನಿಂಗಣ್ಣ, ತಿರುಪತಿ, ರೂಪಾ , ಬೇಬಿ, ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.
ಕೆಆರ್‌ಸಿ ವಸತಿ ಶಾಲೆ: ರಾಜನಕೋಳೂರ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಪ್ರಾಚಾರ್ಯ ಮಾನಪ್ಪ ಸತ್ಯ ಧ್ವಜಾರೋಹಣ ನೆರವೇರಿಸಿದರು. ಸಂಗಮ ರೆಡ್ಡಿ, ರಾಜೇಶ್ವರಿ ಹಿರೇಮಠ, ಬಸಯ್ಯಸ್ವಾಮಿ, ವಿಶ್ವನಾಥ, ರಾಘವೇಂದ್ರ, ಬಸವರಾಜ ಕೋಲಾರ, ಮಹಬೂಬ ಪಟೇಲ್, ಅರುಣ, ಬಸಪ್ಪ, ಮಹಾದೇವಿ, ಶ್ರೀದೇವಿ ಸೇರಿದಂತೆ ಇತರರಿದ್ದರು.
ಕಸ್ತೂರಬಾ ಗಾಂಧಿ ವಸತಿ ಶಾಲೆ: ಕೊಡೇಕಲ್ಲ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ ಪ್ರಾಚಾರ್ಯೆ ರಾಚಮ್ಮ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ನಿಲಯಪಾಲಕಿ ಪರ್ವಿನ, ಈರಮ್ಮ, ಸಂಗೀತಾ, ಸಂಗಮ್ಮ, ಚಂದನ, ಶಕುಂತಲಾ, ಭಾಗ್ಯಶ್ರೀ, ಭವನೇಶ್ವರಿ ಸೇರಿದಂತೆ ಇದ್ದರು.
ಬೈಲಕುಂಟಿ ವರದಿ: ಬೈಲಕುಂಟ ಗ್ರಾಪಂ ದಲ್ಲಿ ಗ್ರಾ.ಪಂ ಅಧ್ಯಕ್ಷೆ ಯಲ್ಲಮ್ಮ ಮಾಲಿಪಾಟೀಲ ಧ್ವಜಾರೋಹಣ ಮಾಡಿದರು. ಈ ವೇಳೆ ರೇಷ್ಮಾ, ರಾಮನಗೌಡ, ಶರಣಪ್ಪ, ಪಿಡಿಒ ಸೋಮಶೇಖರ ಸಿಂಪಿ, ಬಸನಗೌಡ ಮಾಲಿಪಾಟೀಲ, ಸೇರಿದಂತೆ ಗ್ರಾ.ಪಂ ಸದಸ್ಯರು ಮತ್ತು ಸಿಬ್ಬಂದಿ ಇದ್ದರು.
ನಾರಾಯಣಪುರ: ನಾರಾಯಣಪುರ ಗ್ರಾಮದ ಗುಣನಿಯಂತ್ರಣ ಕಚೇರಿಯಲ್ಲಿ ಎಇಇ ಶಂಕ್ರಪ್ಪ ಹಡಲಗೇರಿ ಧ್ವಜಾರೋಹಣ ನೆರವೇರಿಸಿದರು. ಎಂಜಿನಿಯರ್ ಗಳಾದ ಅನುರಾಧಾ, ಸಮರೀನ, ಹುಲಗಮ್ಮ, ಹುಗಮ್ಮ ಬಾಚಿಹಾಳ, ಮಹ್ಮದ್ ಅಲಿ, ಪ್ರಮೋದ ಪದಕಿ, ಬಸಪ್ಪ, ಪುರುಷೋತ್ತಮ ಕೊಳ್ಳಿ ಸೇರಿದಂತೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.