ADVERTISEMENT

ಸೈದಾಪುರ| ಗಡಿಯಲ್ಲಿ ಕನ್ನಡ ಜಾಗೃತಿ ಕಾರ್ಯ ಶ್ಲಾಘನೀಯ: ಸಚಿವ ಬಾಬುರಾವ ಚಿಂಚನಸೂರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 6:20 IST
Last Updated 12 ನವೆಂಬರ್ 2025, 6:20 IST
<div class="paragraphs"><p>ಸೈದಾಪುರ ಪಟ್ಟಣದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಗಡಿನಾಡು ಉತ್ಸವಕ್ಕೆ ಮಾಜಿ ಸಚಿವ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಚಾಲನೆ ನೀಡಿದರು</p></div>

ಸೈದಾಪುರ ಪಟ್ಟಣದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಗಡಿನಾಡು ಉತ್ಸವಕ್ಕೆ ಮಾಜಿ ಸಚಿವ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಚಾಲನೆ ನೀಡಿದರು

   

ಸೈದಾಪುರ: ‘ಕನ್ನಡ ನಾಡು ಸಾಧು ಸಂತ-ಶರಣರ ತಪೋಭೂಮಿ ಇತಂಹ ಗಡಿ ಭಾಗದಲ್ಲಿ ಕನ್ನಡ ನೆಲ-ಜಲ ಅಭಿವೃದ್ಧಿಗೆ ಸದಾ ಸೇವೆ ಸಲ್ಲಿಸುತ್ತಿರುವ ಜಯ ಕರ್ನಾಟಕ ರಕ್ಷಣಾ ಸೇನೆ ಕಾರ್ಯ ಶ್ಲಾಘನೀಯವಾಗಿದೆ’ ಎಂದು ಮಾಜಿ ಸಚಿವ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಹೇಳಿದರು.

ಪಟ್ಟಣದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನಾ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಗಡಿನಾಡು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ADVERTISEMENT

‘ಈ ನೆಲದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯು ಈ ನಾಡಿನ ನೆಲ-ಜಲ-ಭಾಷೆಯ ಬೆಳವಣಿಗೆಗೆ ಶ್ರಮಿಸಬೇಕು. ನಮ್ಮ ಈ ಗುರುಮಠಕಲ್ ಮತಕ್ಷೇತ್ರವು ತೆಲಾಂಗಣ ಗಡಿಗೆ ಹಂಚಿಕೊಂಡಿದೆ. ಇದರಿಂದಾಗಿ ಅನೇಕ ಸಮಸ್ಯೆಗಳು ಬಂದಾಗ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಕಲೆ, ಸಂಸ್ಕøತಿ ಮತ್ತು ಅಭಿವೃದ್ಧಿಗೆ ಸಹಾಯ ಸಹಕಾರ ನೀಡುತ್ತಾ ಬಂದಿದ್ದೇನೆ’ ಎಂದರು.

ಸಾನ್ನಿಧ್ಯ ವಹಿಸಿದ ಬೆಳಗಾವಿ ಮುಕ್ತಿಮಠದ ಶಿವ ಸಿದ್ಧ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ‘ಕನ್ನಡ ನಾಡಿನ ದಿವ್ಯ ಸಂಸ್ಕೃತಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರ ಭಾಷಿಕರಿಗೆ ಮಾದರಿಯಾಗಬೇಕು. ನಮ್ಮ ನಡೆ-ನುಡಿ ಯಾರದರು ಗಮನಿಸಿದರೆ ಅವರು ಕನ್ನಡಿಗರು ಎಂದು ಹೆಮ್ಮೆಯಿಂದ ಮಾತಾಡಿದಾಗ ಇಂತಹ ಉತ್ಸವಗಳು ಯಶಸ್ವಿಯಾದಂತೆ’ ಎಂದರು.

ಗುರುಮಠಕಲ್ ಖಾಸ ಮಠದ ಶಾಂತವೀರ ಮುರಘಾರಾಜೇಂದ್ರ ಸ್ವಾಮೀಜಿ, ಗುರುಮೂರ್ತಿ ಶಿವಚಾರ್ಯರು ಕಡೇಚೂರು, ಸೋಮೇಶ್ವರನಂದ ಸ್ವಾಮೀಜಿ ಸೈದಾಪುರ, ಪಂಚಮಸಿದ್ಧಲಿಂಗ ಸ್ವಾಮೀಜಿ ನೇರಡಂಗ, ಕ್ಷೀರಲಿಂಗ ಸ್ವಾಮೀಜಿ ಚೇಗುಂಟ, ಕರವೇ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನೋರ್, ರಕ್ಷಣಾ ಸೇನೆಯ ವಲಯಾಧ್ಯಕ್ಷ ವಿರೇಶ ಸಜ್ಜನ್, ಯುವ ನಾಯಕ ಮಹೇಶರೆಡ್ಡಿ ಮುದ್ನಾಳ್, ಶರಣಪ್ಪ ಮಾನೇಗಾರ, ಸಿದ್ದಣಗೌಡ ಕಡೇಚೂರು, ಬಸವರಾಜಯ್ಯಸ್ವಾಮಿ ಬದ್ದೇಪಲ್ಲಿ, ನಿರಂಜನರೆಡ್ಡಿ ಪಾಟೀಲ್, ಚಂದ್ರುಗೌಡ ಮಾಲಿಪಾಟೀಲ್, ವೆಂಕಟೇಶ್ ಪುರಿ, ಚಂದ್ರಶೇಖರ ವಾರದ್, ಗ್ರಾಮ ಘಟಕಾಧ್ಯಕ್ಷ ಶ್ರೀಶೈಲ ಬಾಗ್ಲಿ, ಅಂಜನೇಯ ರಾಂಪೂರ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.