ADVERTISEMENT

ಜ.9 ಕ್ಕೆ ಹುಣಸಗಿ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 6:01 IST
Last Updated 4 ಜನವರಿ 2026, 6:01 IST
ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು
ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು   

ಹುಣಸಗಿ: ‘ಪಟ್ಟಣದಲ್ಲಿ ಹಮ್ಮಿಕೊಂಡಿರುವ ತಾಲ್ಲೂಕು ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ ಯಶಯಸ್ವಿಗೆ ಎಲ್ಲ ಸಮಿತಿಗಳು ಉತ್ತಮ ರೀತಿಯಾಗಿ ಕಾರ್ಯನಿರ್ವಹಿಸಬೇಕು’ ಎಂದು ಜಿಪಂ ಮಾಜಿ ಸದಸ್ಯ ನಾಗಣ್ಣ ಸಾಹು ದಂಡಿನ್‌ ಹೇಳಿದರು.

ಹುಣಸಗಿ ಪಟ್ಟಣದಲ್ಲಿ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರದ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

‘ಒಂದು ದಿನದ ಈ ಸಮ್ಮೇಳನವು ಐತಿಹಾಸಿಕವಾಗುವಂತೆ ಮಾಡಲು ಈಗಾಗಲೇ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದು, ಅಚ್ಚುಕಟ್ಟಗಿ ನಡೆಯಲು ಪಟ್ಟಣದ ಎಲ್ಲರ ಸಹಕಾರವೂ ಇದೆ’ ಎಂದು ಹೇಳಿದರು.

ADVERTISEMENT

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ‘ಜ. 9 ರಂದು ಸಮ್ಮೇಳನದ ಸ್ಥಳದಲ್ಲಿ ಬೆಳಿಗ್ಗೆ ರಾಷ್ಟ್ರ ಧ್ವಜಾರೋಹಣವನ್ನು ಶಾಸಕ ರಾಜಾ ವೇಣುಗೋಪಾಲನಾಯಕ ನೆರವೇರಿಸಲಿದ್ದು, ಹಾಗೂ ಪರಿಷತ್‌ ಧ್ವಜಾರೋಹಣದ ಬಳಿಕ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಅಲಂಕೃತ ವಾಹನದಲ್ಲಿ ಸರ್ವಾಧ್ಯಕ್ಷರಾದ ವಿರೇಶ ಹಳ್ಳೂರ ಅವರ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಗೆ ಮಾಜಿ ಸಚಿವ ನರಸಿಂಹನಾಯಕ ರಾಜೂಗೌಡ ಅವರು ಚಾಲನೆ ನೀಡಲಿದ್ದಾರೆ’ ಎಂದು ತಿಳಿಸಿದರು.

‘ಮೆರವಣಿಗೆಯಲ್ಲಿ ತಾಲ್ಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಹಳ್ಳಿಗಳಿಂದ ಸಾವಿರಾರು ಯುವಕರು ಆಗಮಿಸಲಿದ್ದು, ಹಲವಾರು ಕಲಾತಂಡಗಳಿಂದ ಡೊಳ್ಳು ಕುಣಿತ, ಹಲಗೆ ವಾದನ, ಕುದುರೆ ಕುಣಿತ ಇರಲಿದೆ’ ಎಂದರು.

ಜಿಪಂ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಪಟ್ಟಣ ಪಂಚಾಯಿತಿ ಸದಸ್ಯ ಸಿದ್ರಾಮಪ್ಪ ಮುದಗಲ್ಲ ಮಾತನಾಡಿದರು.

ಮುಖಂಡರಾದ ವಿರೇಶ ಚಿಂಚೋಳಿ, ಬಿ.ಎಂ.ಅಳ್ಳಿಕೋಟಿ, ಆರ್.ಎಂ.ರೇವಡಿ, ಮೋತಿಲಾಲ್‌ ಚವಾಣ, ಮೇಲಪ್ಪ ಗುಳಗಿ, ಬಸವರಾಜ ಸಜ್ಜನ, ಗುಂಡು ಅಂಗಡಿ, ರವಿ ಮಲಗಲದಿನ್ನಿ, ಮಂಜು ಬಳಿ, ನಂದಪ್ಪ ಪೀರಾಪುರ, ಆನಂದ ಬಾರಿಗಿಡದ, ನೀಲಕಂಠ ವೈಲಿ, ಹೊನ್ನಕೇಶವ ದೇಸಾಯಿ, ನಾಗನಗೌಡ ಪಾಟೀಲ, ಬಸವರಾಜ ಕೋಳಕೂರು, ಪ್ರಾಣೇಶ ಕುಲಕರ್ಣಿ, ವೆಂಕಟೇಶ ಇಸಾಂಪುರ, ಮಲ್ಲಣ್ಣ ಡಂಗಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.