
ಯಾದಗಿರಿ: ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಶನಿವಾರ ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಕನ್ನಡ ಹಿರಿಮೆಯನ್ನು ಸಾರುವ ಹಾಡುಗಳ ಮಾರ್ದನಿಸಿದವು.
ಸಂಘ–ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಾಯಿತು.
ಆಟೊ ಚಾಲಕರು ತಮ್ಮ ನಿಲ್ದಾಣಗಳಲ್ಲಿ ತಾಯಿ ಭುವನೇಶ್ವರಿ ಫೋಟೊಗಳನ್ನು ಇರಿಸಿ ಪೂಜೆ ಸಲ್ಲಿಸಿ, ಹಳದಿ ಮತ್ತು ಕೆಂಪು ಬಣ್ಣದ ಧ್ವಜಾರೋಹಣ ಮಾಡಿದರು. ಯುವಕರು ಬೈಕ್‌ಗಳಲ್ಲಿ ನಾಡ ಧ್ವಜಗಳನ್ನು ಹಿಡಿದು, ಕೆಲ ಆಟೊ ಚಾಲಕರು ದೊಡ್ಡ ಬಾವುಟಗಳನ್ನು ಹಿಡಿದು ಸಂಭ್ರಮಿಸಿದರು.
ಕರವೇ: ನಗರದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ
ಟಿ.ಎನ್.ಭೀಮುನಾಯಕ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಐತಿಹಾಸಿಕ ಕೋಟೆ ಮೇಲಿನ ನಾಡದೇವತೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
‘ರಾಜ್ಯದಲ್ಲಿ ಹಲವು ಭಾಷಿಕರು ನೆಲೆಸಿದ್ದು, ಭಾಷಾ ಸಾಮರಸ್ಯ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಮಾತೃ ಭಾಷೆಯ ಮೇಲೆ ಪ್ರೀತಿ, ನಾಡ ಭಾಷೆಯ ಮೇಲೆ ಗೌರವ ಹೊಂದಿರಬೇಕು. ಎಲ್ಲರೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು’ ಎಂದರು.
ಕರವೇ ಮುಖಂಡರಾದ ಅಂಬರೇಶ ಹತ್ತಿಮನಿ, ಭೀಮರಾಯ ರಾಮಸಮುದ್ರ, ಅಶೋಕ ನಾಯಕ, ಬಸವರಾಜ ಜಗನಾಥ್, ಮಲ್ಲಿಕಾರ್ಜುನ ಕನ್ನಡಿ, ಜನಾರ್ಧನ ಬಡಿಗೇರ, ಚನ್ನು ಹುರುಂಚಾ, ಬಸುನಾಯಕ, ಹತ್ತಿಕುಣಿ, ಅಂಬುನಾಯಕ ಹತ್ತಿಕುಣಿ, ಹಣಮಂತ ಹುರುಂಚಾ, ಮಂಜು ಎಸ್. ನಾಯ್ಕೊಡಿ, ಶರಣು ಹಬ್ಬಳ್ಳಿ, ಸಿದ್ದು ರಾಮಸಮುದ್ರ, ಮಲ್ಲು ಬಡಿಗೇರ ಸೇರಿ ಹಲವರು ಪಾಲ್ಗೊಂಡಿದ್ದರು.
ಶಿವಸೇನೆ: ನಗರದ ಶಿವಸೇನೆ ಕರ್ನಾಟಕ (ಏಕನಾಥ ಶಿಂಧೆ ಬಣ) ಕಚೇರಿ ಮುಂಭಾಗದಲ್ಲಿ ರಾಜ್ಯ ಕಾರ್ಯದರ್ಶಿ ವಿಜಯ ಪಾಟೀಲ ಅವರು ತಾಯಿ ಭುವನೇಶ್ವರಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಕೊಡಲ್, ಗೌರವಾಧ್ಯಕ್ಷ ಎನ್.ವಾರದ್, ಜಿಲ್ಲಾ ಉಪಾಧ್ಯಕ್ಷ ಬಸವರಾಜಪ್ಪಗೌಡ ಕನ್ಯಾಕೊಳೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಾಂಕ್ ನಾಯಕ, ಯುವ ಘಟಕದ ಜಿಲ್ಲಾಧ್ಯಕ್ಷ ಸಂದೀಪ್ ಮಹೇಂದ್ರಕರ್, ಮುಖಂಡ ಹಣಮಂತ್ರಾಯ ಪಾಟೀಲ ಉಪಸ್ಥಿತರಿದ್ದರು.
ಡಿಡಿಯು ಶಾಲೆ: ನಗರದ ಡಿ ದೇವರಾಜ ಅರಸ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ (ಕನ್ನಡ ಮಾಧ್ಯಮ) ಶಾಲೆಯಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ತಾಯಿ ಭುವನೇಶ್ವರಿ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು.
ಮುಖ್ಯಶಿಕ್ಷಕ ವೆಂಕಟೇಶ ಪೂಜಾರಿ, ವಸತಿ ನಿಲಯದ ಮೇಲ್ವಿಚಾರಕ ನಿಂಗಣ್ಣ ಹೊಸಮನಿ, ಶಿಕ್ಷಕರಾದ ಕವಿತಾ ಪಾಟೀಲ, ಅಯ್ಯಣ್ಣ ಕೆ, ಪ್ರಭು ಮೈಲಾರಿ, ಹುಚ್ಚಪ್ಪ ದೇವರಗೋನಾಲ, ಸರೀತಾಕುಮಾರಿ, ನಸರೀನ್ ಬೇಗಂ, ಮಹೇಬೂಬ್ ಖಾನ್, ಮಹ್ಮದ್ ಸೌದಗರ್, ಯಲ್ಲಮ್ಮ ಉಪಸ್ಥಿತರಿದ್ದರು.
ಬಿಜೆಪಿ ಕಚೇರಿಯಲ್ಲಿ ಆಚರಣೆ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ತಾಯಿ ಭುವನೇಶ್ವರಿ ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ‘ಮೈಸೂರು ರಾಜ್ಯ ಕರ್ನಾಟಕವಾದ ಇತಿಹಾಸದಲ್ಲಿ ಮರೆಯ ಹೆಗ್ಗುರುತುಗಳಿವೆ. ಕನ್ನಡ ಭಾಷಿಕರನ್ನು ಮತ್ತೊಮ್ಮೆ ಭಾವನಾತ್ಮಕವಾಗಿ ಕಟ್ಟಿಕೊಡುವಂತಹ ಕೆಲಸವಾಗಬೇಕಿದೆ’ ಎಂದರು. ‘ಕನ್ನಡ ಕೇವಲ ಭಾಷೆಯಲ್ಲ ಅದು ನಮ್ಮ ಬದುಕಿನ ಭವಿಷ್ಯವಾಗಿದೆ. ಕನ್ನಡವನ್ನು ಉಳಿಸಿಕೊಳ್ಳಲು ಪ್ರಮಾಣ ಪ್ರಯತ್ನ ಮಾಡೋಣ’ ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮುಖಂಡರಾದ ರಾಚಣ್ಣಗೌಡ ಮುದ್ನಾಳ ನಾಗರತ್ನ ಕುಪ್ಪಿ ದೇವಿಂದ್ರನಾಥ ನಾದ ಪರುಶುರಾಮ ಕುರಕುಂದಿ ಹಣಮಂತ ಇಟಗಿ ವೆಂಕಟರೆಡ್ಡಿ ಅಬ್ಬೆತುಮಕೂರು ರುಕೀಯ್ ಬೇಗಂ ವಿಜಯಲಕ್ಷ್ಮಿ ನಾಯಕ ಲಿಂಗಪ್ಪ ಹತ್ತಿಮನಿ ಸುನಿತಾ ಚವ್ಹಾಣ್ ಬಸವರಾಜಪ್ಪಗೌಡ ಬಿಳಾರ ಶಾಂತಗೌಡ ಪಗಲಪುರ ಸುರೇಶ್ ಆಕಳ ಮಲ್ಲಿಕಾರ್ಜುನ ಕಟ್ಟಿಮನಿ ಮರಲಿಂಗ ಜಿನಿಕೇರಿ ಶರಣುಗೌಡ ಅಲಿಪುರ ಸ್ನೇಹ ರಸಳಕರ್ ಮಹದೇವಪ್ಪ ಗಣಪುರ ದೇವಿಂದ್ರಪ್ಪ ಯರಗೋಳ ಚಂದ್ರಕಲಾ ಕಿಲನಕೇರ ಶಕುಂತಲಾ ಜಿ ಚನ್ನವೀರಯ್ಯ ಸ್ವಾಮಿ ಸಾಲು ಯಡಳ್ಳಿ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.