
ಹುಣಸಗಿ: ‘ಹಿಂದೂಗಳಿಗೆ ಶ್ರಾವಣ ಮಾಸದಷ್ಟೇ ಕಾರ್ತಿಕ ಮಾಸವೂ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಮಾಸದಲ್ಲಿ ವಿಷ್ಣು, ಶಿವನ ಪೂಜೆ ಹಾಗೂ ಧಾತ್ರಿ ಪೂಜೆಯಿಂದ ಎಲ್ಲ ಇಷ್ಟಾರ್ಥಗಳನ್ನು ಪಡೆದುಕೊಳ್ಳಬಹುದಾಗಿದೆ’ ಎಂದು ಬಳ್ಳಾರಿಯ ಸಾಯಿರಾಂ ರವಿಚಂದ್ರನ್ ಹೇಳಿದರು.
ಹುಣಸಗಿ ಪಟ್ಟಣದ ಹೊರವಲದಲ್ಲಿರುವ ಮದ್ದಿನಮನಿ ಕ್ಯಾಂಪ್‌ನಲ್ಲಿ ಭಾನುವಾರ ಕಮ್ಮಾವಾರಿ ಸಂಘದಿಂದ ಹಮ್ಮಿಕೊಂಡಿದ್ದ ಸತ್ಯನಾರಾಯಣ ಪೂಜಾ ಉತ್ಸವ ಹಾಗೂ ವನಭೋಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರವಚನ ನೀಡಿದರು.
‘ದೇವರ ಸ್ಮರಣೆಯೊಂದಿಗೆ ನಿತ್ಯ ಬೆಳಿಗ್ಗೆ ದೀಪಾರಾಧನೆ ಹಾಗೂ ಗಂಗಾರಾಧನೆ ಮಾಡುವದರಿಂದ ಆರೋಗ್ಯ ಸಂಪತ್ತು ಎಲ್ಲವೂ ಲಭಿಸುತ್ತದೆ. ಈ ಮಾಸದಲ್ಲಿ ಬ್ರಾಹ್ಮೀ ಮೂಹೂರ್ತದಲ್ಲಿ ಸಮುದ್ರ, ನದಿ ತೀರ್ಥ ಕ್ಷೇತ್ರಗಳಲ್ಲಿ ಸ್ನಾನ ಮಾಡುವದು ಅತ್ಯಂತ ಶ್ರೇಯಸ್ಸು ಎಂದು ಹೇಳಲಾಗುತ್ತದೆ’ ಎಂದರು.
ಮುರಳೀಧರಶಾಸ್ತ್ರಿ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಎಲ್ಲರಿಗೂ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಕಮ್ಮವಾರಿ ಸಂಘದ ಹುಣಸಗಿ ತಾಲ್ಲೂಕು ಅಧ್ಯಕ್ಷ ಆರ್.ವೆಂಕಟರಾವ್, ಕಾರ್ಯದರ್ಶಿ ವಿ.ಸುರೇಶಬಾಬು, ಕೆ.ಕೇಶವರಾವ್, ಸುಭ್ರಮಣ್ಣೇಶ್ವರ, ಎ.ಜೆ.ನೆಹರು, ಮೋಹನರಾವ್ ಸುರಪುರ, ರಾಘವೇಂದ್ರ ಕೆಂಭಾವಿ, ರವಿ ಬೆನಕನಹಳ್ಳಿ, ಕೆ.ಎಚ್.ರವೀಂದ್ರ, ಸತ್ಯಬಾಬು, ಬಿ. ಶ್ರೀನಿವಾಸ ಅರಕೇರಾ ಕ್ರಾಸ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.