ADVERTISEMENT

ಶಹಾಪುರ: ಕಸಾಪ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 6 ಮೇ 2022, 4:04 IST
Last Updated 6 ಮೇ 2022, 4:04 IST
ಶಹಾಪುರ ನಗರದ ಕನ್ನಡ ಭವನದಲ್ಲಿ ಗುರುವಾರ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು
ಶಹಾಪುರ ನಗರದ ಕನ್ನಡ ಭವನದಲ್ಲಿ ಗುರುವಾರ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು   

ಶಹಾಪುರ: ನಾಡು-ನುಡಿ ಬೆಳೆಸುವ ಕಾರ್ಯಚಟುವಟಿಕೆಗಳು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೆಚ್ಚಾಗಿ ನಡೆಯಬೇಕು ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗುರುವಾರ ಹಮ್ಮಿಕೊಂಡ ಪರಿಷತ್ತಿನ 107ನೇ ಸಂಸ್ಥಾಪನಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನದ ಇತಿಹಾಸವಿದೆ. ಕನ್ನಡ ನೆಲ, ಜಲ, ಶಿಕ್ಷಣ, ಸಂಸ್ಕೃತಿ ಬೆಳೆಸಲು ಅವಿರತ ಶ್ರಮಿಸುತ್ತ ಬಂದಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು ಕುರಿತು ಉಪನ್ಯಾಸ ನೀಡಿದ ಸಾಹಿತಿ ಡಾ.ಗಾಳೆಪ್ಪ ಪೂಜಾರಿ ಅವರು, ಪರಿಷತ್ತು ಸ್ಥಾಪನೆಯ ಆಶಯಗಳನ್ನು ಇಟ್ಟುಕೊಂಡು ರಚನಾತ್ಮಕವಾಗಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸ್ಥಳೀಯ ಹಿರಿಯ ಲೇಖಕರ, ಯುವ ಬರಹಗಾರರ ಸಾಹಿತ್ಯ ಕೃತಿಗಳ ಕುರಿತು ವಿಮರ್ಶಗಳಾಗಬೇಕು. ಉತ್ತಮವಾದ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಿಸಲು ಪರಿಷತ್ತು ಶ್ರಮಿಸಬೇಕು ಎಂದರು.

ನಿಕಟಪೂರ್ವ ಕಸಾಪ ಅಧ್ಯಕ್ಷ ಸಿದ್ಧಲಿಂಗಣ್ಣ ಆನೆಗುಂದಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಂದ್ರನಾಥ ಹೊಸ್ಮನಿ, ಪತ್ರಕರ್ತರ ಸಂಘದ ಅಧ್ಯಕ್ಷ ನಾರಾಯಣಚಾರ್ಯ ಸಗರ, ನಾಗರಡ್ಡಿ ಗೋಗಿ, ಗುತ್ತಪ್ಪ ಬಡಿಗೇರ, ಸರೀತಾ ಎಮ್. ಸಿಂಘೆ, ಸಣ್ಣನಿಂಗಪ್ಪ ನಾಯ್ಕೋಡಿ, ಸಾಯಿಬಣ್ಣ ಪುರ್ಲೆ, ಬಸವರಾಜ ಹಿರೇಮಠ, ಹುಸನಪ್ಪ ಕಟ್ಟಿಮನಿ, ಶಕುಂತಲಾ ಹಡಗಲಿ, ಗುರುಬಸಯ್ಯ ಗದ್ದುಗೆ, ಸಾಯಿಬಣ್ಣ ಮಡಿವಾಳಕರ್, ಅಶೋಕ ಚೌದರಿ, ನಾಗಣ್ಣಗೌಡ ಕನ್ಯಾಕೊಳುರ, ನಿರ್ಮಲಾ ತುಂಬಗಿ, ಕಾವೇರಿ ಪಾಟೀಲ, ಚಂದ್ರಕಲಾ ಗೂಗಲ್, ನಿಂಗಣ್ಣ ನಾಟೇಕಾರ, ಸಿದ್ಧಪ್ಪ ಮುಟ್ಟೂರು, ಬಿ.ಎಂ.ಪೂಜಾರಿ, ಸತೀಶ ತುಳೇರ, ಸುರೇಶಬಾಬು ಅರುಣಿ, ರಾಘವೇಂದ್ರ ಹಾರಣಗೇರಾ, ಮಿನಾಕ್ಷಿ ಹೊಸ್ಮನಿ, ಗೌಡಪ್ಪಗೌಡ ಹುಲ್ಕಲ್, ರುದ್ರಪ್ಪ ತಳವಾರ, ಸಂತೋಷ ಕಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.