ADVERTISEMENT

ಕಸಾಪ ವಿಶೇಷ ವ್ಯಕ್ತಿ ಪ್ರಶಸ್ತಿ ಪ್ರದಾನ

ಸಾಹಿತ್ಯ ಲೋಕಕ್ಕೆ ವಿಶಿಷ್ಠ ಕೊಡುಗೆ ನೀಡಿದ ಜೋಶಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 8:01 IST
Last Updated 13 ಜನವರಿ 2026, 8:01 IST
ಕೆಂಭಾವಿ ಪಟ್ಟಣದಲ್ಲಿ ಭಾನುವಾರ ವಲಯ ಕಸಾಪ ವತಿಯಿಂದ ಪ್ರಹ್ಲಾದಾಚಾರ್ಯ ಜೋಶಿ ಅವರಿಗೆ ವರ್ಷದ ವಿಶೇಷ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಕೆಂಭಾವಿ ಪಟ್ಟಣದಲ್ಲಿ ಭಾನುವಾರ ವಲಯ ಕಸಾಪ ವತಿಯಿಂದ ಪ್ರಹ್ಲಾದಾಚಾರ್ಯ ಜೋಶಿ ಅವರಿಗೆ ವರ್ಷದ ವಿಶೇಷ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಕೆಂಭಾವಿ: ‘ಹಿಂದಿನ ಶಿಕ್ಷಕರು ತಮ್ಮ ವಿದ್ಯಾರ್ಜನೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಅನೇಕ ಸಾಧನೆಗಳನ್ನು ನಾಡಿಗೆ ನೀಡಿದವರು, ಅಂಥಾ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೆ ವಿಶಿಷ್ಠ ಕೊಡುಗೆ ನೀಡಿದ ನಿವೃತ್ತ ಶಿಕ್ಷಕ ಜೋಶಿ ಅವರನ್ನು ಗುರುತಿಸಿ ವಿಶೇಷ ವ್ಯಕ್ತಿ ಪ್ರಶಸ್ತಿ ನೀಡುತ್ತಿರುವ ಕಸಾಪದ ಕಾರ್ಯ ಅಭಿನಂದನಾರ್ಹ’ ಎಂದು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ ಹೇಳಿದರು.

ಭಾನುವಾರ ಪಟ್ಟಣದಲ್ಲಿ ವಲಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಾವುದೆ ರಂಗದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಸಮಾಜ ಮತ್ತು ಸಂಘಟನೆಗಳು ಗುರುತಿಸಿ ಅವರಿಗೆ ಪುರಸ್ಕಾರ ಮಾಡಿದಾಗ ಮಾತ್ರ ಅಂಥಾ ವ್ಯಕ್ತಿಗಳ ಸಾಧನೆ ಜಗತ್ತಿಗೆ ತೋರಲು ಸಾಧ್ಯ’ ಎಂದು ಹೇಳಿದರು.

ADVERTISEMENT

ನಂತರ ಪ್ರಹ್ಲಾದಾಚಾರ್ಯ ಜೋಶಿ ಅವರಿಗೆ ಪ್ರಶಸ್ತಿ ಪತ್ರ ಫಲ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಹ್ಲಾದಾಚಾರ್ಯ ಜೋಶಿ, ‘ಕೆಂಭಾವಿ ಪಟ್ಟಣ ಹಲವು ಇತಿಹಾಸಕಾರರನ್ನು ಮತ್ತು ಸಾಹಿತ್ಯ ಲೋಕವನ್ನು ತನ್ನ ಮಡಿಲಿಗೆ ಹಾಕಿಕೊಂಡ ಐತಿಹಾಸಿಕ ಗ್ರಾಮವಾಗಿದೆ. ನನ್ನ ಅಲ್ಪ ಸಾಧನೆಯನ್ನು ಗುರುತಿಸಿ ಗೌರವಿಸಿದ ಕನ್ನಡ ಸಾಹಿತ್ಯ ಪರಿಷತ್‍ನ ಎಲ್ಲ ಪದಾಧಿಕಾರಿಗಳಿಗೆ ನಾನು ಸದಾ ಆಭಾರಿಯಾಗಿದ್ದೇನೆ’ ಎಂದರು.

‘ಕನ್ನಡ ಅತ್ಯಂತ ಸರಳ ಮತ್ತು ಸುಂದರ ಭಾಷೆ. ಅಷ್ಟೆ ಅಲ್ಲದೆ ಸಾಹಿತ್ಯದ ಪದಪುಂಜ ನಿರ್ಮಿಸಲು ಅತ್ಯಂತ ಶ್ರೇಷ್ಠ ಭಾಷೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಮೇಲೆ ಇನ್ನಿತರೆ ಭಾಷಿಕರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಹೀಗಾಗಿ ಇದನ್ನು ತಡೆಯಲು ಎಲ್ಲರೂ ಒಗ್ಗೂಡಿನಿಂದ ಕೆಲಸ ಮಾಡಬೇಕು’ ಎಂದರು.

ವಲಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡಿವಾಳಪ್ಪ ಪಾಟೀಲ, ಸಾಹಿತಿ– ಚಿತ್ರಕಲಾವಿದ ಹಳ್ಳೇರಾವ ಕುಲಕರ್ಣಿ ಮಾತನಾಡಿದರು.

ಚನ್ನಯ್ಯ ಚಿಕ್ಕಮಠ ಸಾನ್ನಿಧ್ಯ ವಹಿಸಿದ್ದರು. ಜಯಸತ್ಯಪ್ರಮೋದ ಸೇವಾ ಸಂಘದ ಕಾರ್ಯದರ್ಶಿ ತಿರುಮಲಾಚಾರ್ಯ ಜೋಷಿ, ಪುರಸಭೆ ಸದಸ್ಯ ಸುಧಾಕರ ಡಿಗ್ಗಾವಿ, ನಿವೃತ್ತ ಉಪನ್ಯಾಸಕ ನರಸಿಂಹರಾವ ಕುಲಕರ್ಣಿ, ಸಾಹಿತಿ ನಿಂಗನಗೌಡ ದೇಸಾಯಿ, ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ, ರಾಮನಗೌಡ ಪೊಲೀಸ್ ಪಾಟೀಲ, ವೀರಣ್ಣ ಕಲಕೇರಿ, ಪಾರ್ವತಿ ಬೂದೂರ, ನಾಗರತ್ನಾ ಕುಲಕರ್ಣಿ, ವಲಯ ಕಸಾಪ ಪದಾಧಿಕಾರಿಗಳಾದ ಮಹಿಪಾಲರೆಡ್ಡಿ ಡಿಗ್ಗಾವಿ, ಮಲ್ಲನಗೌಡ ಪಾಟೀಲ, ನಂದಪ್ಪ ಕವಾಲ್ದಾರ, ಜೆಟ್ಟೆಪ್ಪ ಮಾಳಹಳ್ಳಿ, ರಂಗಪ್ಪ ವಡ್ಡರ್, ಇಲಿಯಾಸ ವಡಕೇರಿ ಸೇರಿ ಹಲವರಿದ್ದರು.

ಯಂಕನಗೌಡ ಪಾಟೀಲ ನಿರೂಪಿಸಿದರು, ಬಂದೇನವಾಜ ನಾಲತವಾಡ ಸ್ವಾಗತಿಸಿದರು, ವಿಜಯಾಚಾರ್ಯ ಪುರೋಹಿತ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.