ADVERTISEMENT

ಯಾದಗಿರಿ| ಕೆಕೆಆರ್‌ಟಿಸಿ ಬಸ್‌ ಟೈರ್ ಬಳಿ ಹೊಗೆ; ಆತಂಕ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 6:15 IST
Last Updated 25 ನವೆಂಬರ್ 2025, 6:15 IST
ಬಸ್‌ನ ಹಿಂಬದಿಯ ಟೈರ್ ಸಮೀಪ ಕಾಣಿಸಿಕೊಂಡ ಹೊಗೆ
ಬಸ್‌ನ ಹಿಂಬದಿಯ ಟೈರ್ ಸಮೀಪ ಕಾಣಿಸಿಕೊಂಡ ಹೊಗೆ   

ಯಾದಗಿರಿ: ನಗರ ಹೊರವಲಯದಲ್ಲಿ ಸೋಮವಾರ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 

ಗುರುಮಠಕಲ್ ವಿಭಾಗಕ್ಕೆ ಸೇರಿದ ಗುರುಮಠಕಲ್– ಯಾದಗಿರಿ– ಶಹಾಪುರ– ಮಹಲ್ ರೋಜಾ ನಡುವೆ ಸಂಚರಿಸುವ ಬಸ್‌ನ ಬಲಬದಿಯ ಟೈರ್‌ ಬಳಿ ಹೊಗೆ ಕಾಣಿಸಿಕೊಂಡಿತು. ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರು ಆತಂಕದಿಂದ ಕೆಳಗಿ ಇಳಿದರು. ಕೆಲವರು ಕಿಟಕಿಯಿಂದಲೂ ಜಿಗಿದರು.

‘ಬಸ್‌ನಲ್ಲಿ ಬೆಂಕಿಯಿಂದ ಹೊಗೆ ಕಾಣಿಸಿಕೊಂಡಿಲ್ಲ. ಟೈರ್‌ನ ಲೈನರ್ ಜಾಮ್ ಆಗಿದ್ದರಿಂದ ಬಿಳಿಯಾದ ಹೊಗೆ ಕಾಣಿಸಿಕೊಂಡಿದೆ. ತಾಂತ್ರಿಕ ಸಿಬ್ಬಂದಿಯಿಂದ ಈ ಬಗ್ಗೆ ಮಾಹಿತಿ ಪಡೆಯಲಾಗಿದೆ. ಇದೇ ಬಸ್‌ನಲ್ಲಿ ಈ ಹಿಂದೆಯೂ ಇಂತಹ ಘಟನೆ ನಡೆದಿತ್ತಾ? ನಿಯಮಿತವಾಗಿ ತಪಸಣೆ ಆಗಿದೆ ಎಂಬುದರ ಬಗ್ಗೆ ವರದಿ ಪಡೆಯುತ್ತೇನೆ. ತಪ್ಪು ಕಂಡುಬಂದಲ್ಲಿ ಸಂಬಂಧಪಟ್ಟವರಿಗೆ ನೋಟಿಸ್ ಕೊಟ್ಟು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿ ಜಿ.ಬಿ. ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.