ಸುರಪುರ: ತಾಲ್ಲೂಕಿನ ಶೆಳ್ಳಗಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಸಿಡಿಲು ಬಡಿದು ಪರಮಣ್ಣ ಬಾಲಪ್ಪ ಭಂಡಾರಿ ಅವರಿಗೆ ಸೇರಿದ ಎತ್ತು ಮೃತ ಪಟ್ಟಿದೆ.
ಪರಮಣ್ಣ ಸಾಲ ಮಾಡಿ ₹1.40 ಲಕ್ಷ ನೀಡಿ ಜೋಡೆತ್ತು ತಂದಿದ್ದರು. ₹70 ಸಾವಿರ ಮೌಲ್ಯದ ಒಂದು ಎತ್ತು ಕಳೆದುಕೊಂಡು ಹತಾಶರಾಗಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪಂಚನಾಮೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.