
ಸುರಪುರ: ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದ ಅಧೀನ ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಸಿವಿಲ್ ನ್ಯಾಯಾಲಯ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯ, ಹಿರಿಯ ಸಿವಿಲ್ ಹಾಗೂ ಹೆಚ್ಚುವರಿ 2ನೇ ಜಿಲ್ಲಾ ಸತ್ರ ನ್ಯಾಯಾಲಯಗಳಿಂದ ರಾಜಿ ಸಂದಾನದ ಮೂಲಕ ಒಟ್ಟು 3842 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು ವಿವಿಧ ಕಟ್ಲೆಗಳಿಂದ ಒಟ್ಟು 2.97 ಕೋಟಿ ಹಣ ವಸೂಲಿ ಮಾಡಲಾಗಿದೆ.
2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾದೀಶ ಮರಳುಸಿದ್ದರಾಧ್ಯ ಮಾತನಾಡಿ ‘ರಾಷ್ಟ್ರೀಯ ಲೋಕ ಅದಾತ್‌ನಲ್ಲಿ ಸಂದಾನಕಾರ ವಕೀಲರ ಮೂಲಕ ರಾಜಿ ಸಂಧಾನ ನಡೆಸಿ ಪ್ರಕರಣ ಇತ್ಯರ್ಥ ಪಡಿಸಲಾಗುತ್ತದೆ. ಕಕ್ಷಿದಾರರಿಗೆ ಯಾವುದೇ ಒತ್ತಡವಾಗಲಿ ಬೆದರಿಕೆಯಗಲಿ ಹಾಕುವುದಿಲ್ಲ ಎರಡು ಕಡೆಯ ಕಕ್ಷಿದಾರರು ಒಪ್ಪಿಗೆ ಮೇರೆಗೆ ಪ್ರಕರಣ ಇತ್ಯರ್ಥಪಡಿಸಲಾಗುವುದು. ಇಲ್ಲಿ ಸೋಲು ಗೆಲುವಿನ ಪ್ರಶ್ನ ಬರುವುದಿಲ್ಲ, ಇಬ್ಬರಿಗೂ ನ್ಯಾಯ ದೊರಕಿದ್ದಂತ್ತಾಗುತ್ತದೆ’ ಎಂದರು.
‘ಇದರಿಂದ ಎರಡು ಕಡೆಯ ಕಕ್ಷಿದಾರರಿಗೆ ಸಮಯ ಮತ್ತು ಹಣ ಎರಡು ಉಳಿತಾಯವಾಗುತ್ತದೆ ವ್ಯರ್ಥ ಕೋರ್ಟ್‌ಗೆ ಅಲೆಯುವುದು ತಪ್ಪುತ್ತದೆ. ನ್ಯಾಯ ಪಡೆದುಕೊಂಡ ಸಂತೋಷ ಇಬ್ಬರಲ್ಲಿ ಮೂಡುತ್ತದೆ ಸಮಾಜದಲ್ಲಿ ಪರಸ್ಪರರು ಮತ್ತೆ ಸೌರ್ಹಾದತೆಯಿಂದ ಬದುಕಲು ಅನುಕೂಲವಾಗುತ್ತದೆ’ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಫಕೀರವ್ವ ಕೆಳಗೇರಿ, ಸಿವಿಲ್ ನ್ಯಾಯಾಧೀಶ ಬಸವರಾಜ ಅದಾಲತ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ವಕೀಲ ಚನ್ನಪ್ಪ ಹೂಗಾರ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ರವಿ ನಾಯಕ, ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಸುರೇಂದ್ರ ದೊಡ್ಮನಿ, 2ನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಗೋಪಾಲ ತಳವಾರ ಸಂದಾನಕಾರರಾಗಿದ್ದರು.
ವಕೀಲರಾದ ಮಂಜುನಾಥ ಹುದ್ದಾರ, ಸಂಗಣ್ಣ ಬಾಕ್ಲಿ, ಮಲ್ಲು ಬೋವಿ, ಆದಪ್ಪ ಹೊಸ್ಮನಿ, ರವಿ ನಾಯಕ, ನಾಗಪ್ಪ ಚಾವಲಕರ್, ಭೀಮರಾಯ ದೊಡ್ಮನಿ, ಶಾಂತಗೌಡ ಪಾಟೀಲ. ಕೃಷ್ಣಾ ಕೊಂಗಿ ಕೋರ್ಟ್ ಸಿಬ್ಬಂದಿ ಶ್ರೀಶೈಲ್ ನಾಗನಟಗಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.