ADVERTISEMENT

ಗಾಂಧೀಜಿ ನೂತನ ಮೂರ್ತಿ ಪ್ರತಿಷ್ಟಾಪನೆ 

‘ಸರ್ಕಾರವೇ ಬಲಶೆಟ್ಟಿಹಾಳ ಗಾಂಧೀಜಿ ದೇವಸ್ಥಾನ ನವೀಕರಿಸಲಿ’  

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 14:52 IST
Last Updated 2 ಅಕ್ಟೋಬರ್ 2024, 14:52 IST
ಹುಣಸಗಿ ತಾಲ್ಲೂಕಿನ ಬಲಶೆಟ್ಟಿಹಾಳದ ಮಹಾತ್ಮ ಗಾಂಧೀಜಿ ದೇವಸ್ಥಾನದಲ್ಲಿ ನೂತನ ಮೂರ್ತಿಯನ್ನು ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು
ಹುಣಸಗಿ ತಾಲ್ಲೂಕಿನ ಬಲಶೆಟ್ಟಿಹಾಳದ ಮಹಾತ್ಮ ಗಾಂಧೀಜಿ ದೇವಸ್ಥಾನದಲ್ಲಿ ನೂತನ ಮೂರ್ತಿಯನ್ನು ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು   

ಹುಣಸಗಿ: ‘ಮಹಾತ್ಮ ಗಾಂಧೀಜಿ ದೇವಸ್ಥಾನ ಬಲಶೆಟ್ಟಿಹಾಳಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ನಿವೃತ್ತ ಶಿಕ್ಷಕ ಅಯ್ಯಣ್ಣಸ್ವಾಮಿ ಹಿರೇಮಠ ಹೇಳಿದರು.

ತಾಲ್ಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಜಯಂತಿ ಅಂಗವಾಗಿ ನೂತನ ಮೂರ್ತಿ ಮೆರವಣಿಗೆ ಬಳಿಕ ಅವರು ಮಾತನಾಡಿ,‘ಗ್ರಾಮದ ಅಪ್ಪಟ ಗಾಂಧಿವಾದಿ ಹಂಪಣ್ಣ ಸಾಹುಕಾರ ಅವರು ತಂಡದೊಂದಿಗೆ ದೇವಸ್ಥಾನ ನಿರ್ಮಿಸಿದ್ದರಿಂದ ಗ್ರಾಮದ ಹೆಸರು ಎಲ್ಲೆಡೆ ಬರುವಂತಾಗಿದೆ’ ಎಂದರು.

ಶಿಕ್ಷಕ ವೀರಣ್ಣ ಬೆಳ್ಳುಬ್ಬಿ ಮಾತನಾಡಿ,‘ಗ್ರಾಮದ ಶಾಲಾ ಮಕ್ಕಳು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಪ್ರಮುಖರು ಇಂದಿಗೂ ಕೂಡಾ ಗಾಂಧಿಜಯಂತಿ ದಿನ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸುವುದು ಹೆಚ್ಚು ಮಹತ್ವದ್ದಾಗಿದೆ’ ಎಂದರು.

ADVERTISEMENT

ಹಂಪಣ್ಣ ಸಾಹುಕಾರ ಪುತ್ರ ಬಸವರಾಜ ಚಿಂಚೋಳಿ, ಗ್ರಾಮದ ತಿಪ್ಪಣ್ಣಗೌಡ ಬಿರಾದಾರ, ಎಂ.ಆರ್.ಖಾಜಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕಾಳಜಿವಹಿಸಿ ಮಹಾತ್ಮ ಗಾಂಧೀಜಿ ಅವರ ದೇವಸ್ಥಾನ ನವೀಕರಿಸಬೇಕು’ ಎಂದು ಒತ್ತಾಯಿಸಿದರು.

ಗ್ರಾಮದ ಬಸಲಿಂಗ ಮಠದ ಸಿದ್ದಲಿಂಗಯ್ಯಶಾಸ್ತ್ರಿ, ಶಾಂತಗೌಡ ಚನ್ನಪಟ್ಟಣ, ಹಿರಿಯರಾದ ತಿಪ್ಪಣ್ಣಗೌಡ ಬಿರಾದಾರ, ಟಿಪ್ಪುಸುಲ್ತಾನ ಅವರಾದಿ, ಸಾಯಬಣ್ಣ ಕ್ಯಾತನಾಳ, ರಾಯಪ್ಪ ಜೋಗಿನ್, ರಾಚಯ್ಯ ಹತ್ತಿ, ಸಂಗಯ್ಯ ಬಾಚ್ಯಾಳ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.