ಯಾದಗಿರಿ: ನಗರದ ವನಮಾರಪಳ್ಳಿ-ರಾಯಚೂರು(ಎಸ್‌ಎಚ್- 15) ರಸ್ತೆ ಮತ್ತು ಭೀಮಾ ನದಿ ಹಾಗೂ ರೈಲ್ವೆ ಸೇತುವೆಗಳಲ್ಲಿ ಇತ್ತೀಚಿಗೆ ಕೈಗೊಂಡ ದುರಸ್ತಿ ಹಾಗೂ ಕೈಗೊಳ್ಳಬೇಕಾದ ಕೆಲಸದ ಬಗ್ಗೆ ಭಾನುವಾರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಸಚಿವರು, ಎರಡು ಸೇತುವೆಗಳ ಗುಣಮಟ್ಟ ಮತ್ತು ತಾಳಿಕೆ ಬರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
‘ಹೆಚ್ಚಿನ ಕೆಲಸಕ್ಕಾಗಿ ಇನ್ನೂ ₹5 ಕೋಟಿ ಅನುದಾನ ಬೇಕೆಂಬ ಬೇಡಿಕೆ ಹಾಗೂ ಈ ಕುರಿತು ಕಾಮಗಾರಿ ವಿವರ ಮತ್ತು ಕ್ರಿಯಾ ಯೋಜನೆಯನ್ನು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.
ಯಾದಗಿರಿ ತಾಲ್ಲೂಕಿನ ಹತ್ತಿಕುಣಿಯಿಂದ ಸೇಡಂ ಗಡಿಯವರೆಗಿನ 10 ಕಿ.ಮೀ. ರಸ್ತೆಯನ್ನು ಮರು ಡಾಂಬರೀಕರಣ ಮಾಡುವ ವಿಷಯವೂ ಸಚಿವರ ಗಮನಕ್ಕೆ ತರಲಾಯಿತು. ಅಗತ್ಯ ಕಾಮಗಾರಿ ಅಂದಾಜು ಪಟ್ಟಿ ತಯಾರಿಸಿ, ಅನುದಾನ ನೀಡಲಾಗುವುದು ಎಂದು ಎಂದು ಸಚಿವರು ಹೇಳಿದರು.
ಮುಖ್ಯ ಎಂಜಿನಿಯರ್ ಶರಣಪ್ಪ ಸುಲಗುಂಟೆ, ಅಧೀಕ್ಷಕ ಎಂಜಿನಿಯರ್ ಸುರೇಶ್ ಎಲ್. ಶರ್ಮಾ, ಕಾರ್ಯನಿರ್ವಾಹಕ ಎಂಜಿನಿಯರ್ ಅಭಿಮನ್ಯು ಶೃಂಗೇರಿ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪರಶುರಾಮ, ಉಪ -ವಿಭಾಗದ ಶಾಖಾಧಿಕಾರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.