ಶರಣಬಸಪ್ಪ ದರ್ಶನಾಪುರ
ಶಹಾಪುರ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಜಬೂತಾಗಿದೆ. ಹೀಗಿರುವಾಗ ‘ಅಪರೇಶನ್ ಕಮಲ’ದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೀಡಿರುವ ಹೇಳಿಕೆ ದಾರಿ ತಪ್ಪಿಸುವುದಾಗಿದೆ. ಕಾಂಗ್ರೆಸ್ ಸರ್ಕಾರ ಅಲುಗಾಡಿಸುವ ಶಕ್ತಿ ಯಾವ ಪಕ್ಷಕ್ಕೂ ಇಲ್ಲ. ಶಿಂದೆಗೆ ಏನು ಗೊತ್ತು ಕರ್ನಾಟಕದ ರಾಜಕೀಯ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿರುಗೇಟು ನೀಡಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಗೆ ಸೋಲಿನ ಭೀತಿ ಫಲಿತಾಂಶ ಬರುವ ಮುಂಚೆಯೇ ಕಾಡುತ್ತಿದೆ. ಸುಳ್ಳು ಹೇಳಿ ಗೆಲವು ಸಾಧಿಸಲು ಸಾಧ್ಯವಿಲ್ಲ ಎಂದು ಮನವರಿಕೆಯಾದ ಬಳಿಕ ರಾಜ್ಯದಲ್ಲಿ ರಾಜಕೀಯ ರಾಡಿ ಎಬ್ಬಿಸುವ ಕೆಲಸಕ್ಕೆ ಮುಂದಾಗಿದೆ. ಎಲ್ಲಿ ಹೋಯಿತು ರಾಜ್ಯದಲ್ಲಿ 28 ಸ್ಥಾನ ಪಡೆಯುತ್ತೇವೆ ಎಂಬ ಬಿಜೆಪಿ ಮುತ್ಸದ್ದಿಗಳ ಮಾತು. ರಾಜ್ಯದಲ್ಲಿ ಮತದಾನದ ನಂತರ ಬಿಜೆಪಿಯ ಬಣ್ಣದ ನಾಟಕದ ಮಾತು ಬದಲಾಗುತ್ತಲಿವೆ’ ಎಂದು ಛೇಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.