ಹುಣಸಗಿ: ಹುಣಸಗಿ ಪಟ್ಟಣ ಸೇರಿದಂತೆ ತಾಲ್ಲೂಕು ಅಭಿವೃದ್ಧಿಗೆ ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.
ಹುಣಸಗಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ಚರ್ಚಿಸಿ ಬಳಿಕ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
ಪಟ್ಟಣ ಸೇರಿದಂತೆ ತಾಲ್ಲೂಕಿನ ಸಾರ್ವನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪ್ ಐಬಿ ಬಳಿ ಲಭ್ಯ ಇರುವ 2.30 ಎಕರೆ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ಕೆಲವೇ ದಿನಗಲ್ಲಿ ನಿರ್ಮಾಣ ಪ್ರಕ್ರಿಯೆ ಆರಂಭಿಸಲಾಗುವುದು. ಅಲ್ಲದೇ ಸರ್ಕಾರಿ ಪದವಿ ಕಾಲೇಜಿಗೆ ಶೀಘ್ರದಲ್ಲಿ ಸ್ಥಳ ಅಂತಿಮಗೊಳಿಸುವುದಾಗಿ ಹೇಳಿದರು.
ಮುಖಂಡರಾದ ವೆಂಕೋಬ ಯಾದವ, ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಚಂದ್ರಶೇಖರ ದಂಡಿನ್, ಹಿರಿಯರಾದ ಚನ್ನಯ್ಯ ಹಿರೇಮಠ, ಬಾಪುಗೌಡ ಪಾಟೀಲ, ಸಿದ್ದು ಮುದಗಲ್ಲ, ಆರ್.ಎಂ. ರೇವಡಿ, ರವಿ ಮಲಗಲದಿನ್ನಿ, ಮಹಾಂತೇಶ ಮಲಗಲದಿನ್ನಿ, ಕಾಶೀಂ ಸಾಬ ಕೊಣ್ಣೂರ, ತಿಪ್ಪಣ್ಣ, ಶಾಂತಪ್ಪ ಬಾಕ್ಲಿ, ಕನಕಪ್ಪ ಸಿದ್ದಾಪುರ, ಮಲ್ಲಣ್ಣ ಕಟ್ಟಿಮನಿ, ಗುಂಡು ಗೆದ್ದಲಮರಿ, ರಮೇಶ ವಾಲಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.