ADVERTISEMENT

ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅಪ್ಪಟ ದೇಶಪ್ರೇಮಿ: ಭಾಸ್ಕರರಾವ ಮುಡಬೂಳ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 1:42 IST
Last Updated 9 ಫೆಬ್ರುವರಿ 2021, 1:42 IST
8ಎಸ್ಎಚ್ಪಿ 2: ಶಹಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುರಪುರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಭಾಸ್ಕರರಾವ ಮುಡಬೂಳ ಮಾತನಾಡಿದರು
8ಎಸ್ಎಚ್ಪಿ 2: ಶಹಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುರಪುರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಭಾಸ್ಕರರಾವ ಮುಡಬೂಳ ಮಾತನಾಡಿದರು   

ಶಹಾಪುರ: ‘1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ನೇತೃತ್ವ ವಹಿಸಿಕೊಂಡು ತಾಯ್ನಾಡಿಗಾಗಿ ಹೋರಾಟ ನಡೆಸಿ ವೀರ ಮರಣವನ್ನು ಅಪ್ಪಿದ ಸುರಪುರ ಸಂಸ್ಥಾನದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅಪ್ಪಟ ದೇಶಪ್ರೇಮಿಯಾಗಿದ್ದಾರೆ’ ಎಂದು ಭೀಮರಾಯನಗುಡಿ, ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಮುಖ್ಯಸ್ಥ ಭಾಸ್ಕರರಾವ ಮುಡಬೂಳ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುರಪುರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸುರಪುರ ಸಂಸ್ಥಾನದ ಯೋಧರ ಪಡೆ ಬ್ರಿಟಿಷ್ರ ಸೈನ್ಯವನ್ನು ಹಿಮ್ಮೆಟ್ಟಿಸಿತು. ನಮ್ಮ ಸಂಶೋಧನಾ ಕೇಂದ್ರವು ಹಲವು ವರ್ಷಗಳಿಂದ ನಿರಂತರವಾಗಿ ಫೆ.8ರಂದು ಸುರಪುರ ವಿಜಯೋತ್ಸವ ಹಮ್ಮಿಕೊಳ್ಳಲಾಗುತ್ತಿದೆ. ಯುವ ಸಮುದಾಯ ಅದನ್ನು ಅರಿತುಕೊಳ್ಳಲು ವಿಜಯೋತ್ಸವ ಆಚರಿಸಲಾಗುತ್ತಿದೆ. ಪ್ರತಿಯೊಂದು ರಂಗದಲ್ಲಿ ಸುರಪುರ ಸಂಸ್ಥಾನ ತನ್ನದೆ ಆದ ಛಾಪು ಮೂಡಿಸಿದೆ. ವಿದ್ಯಾರ್ಥಿಗಳು ಸಂಸ್ಥಾನದ ಬಗ್ಗೆ ಅಧ್ಯಯನ ಮಾಡುವುದರ ಜೊತೆಯಲ್ಲಿ ಇನ್ನಷ್ಟು ಸಂಶೋಧನೆಗೆ ಮುಂದಾಗಬೇಕು’ ಎಂದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಚೆನ್ನಾರಡ್ಡಿ ತಂಗಡಗಿ, ಸುರಪುರ ಸಂಸ್ಥಾನದ ವಂಶಜ ರಾಜಾ ಲಕ್ಷ್ಮಿನಾರಾಯಣ ನಾಯಕ, ಡಾ.ಉಪೇಂದ್ರ ನಾಯಕ, ಪ್ರೊ.ಆನಂದ ಜೋಷಿ, ನಾಗಪ್ಪ ಚವಲ್ಕರ್, ಡಾ.ಪಿ.ಕೆ ಕುಲಕರ್ಣಿ, ಸೂರ್ಯಕಾಂತ ಉಮ್ಮಾಪುರೆ, ಶಂಕ್ರೆಮ್ಮ ಪಾಟೀಲ್, ಡಾ.ಸಂತೋಷ ಹುಗ್ಗಿ, ಡಾ. ಶರಣಪ್ಪ ಸಂಘರ್ಷ, ಜಗದೀಶ ಪತ್ತಾರ ರಂಗಂಪೇಟ, ರಾಘವೇಂದ್ರ ಹಾರಣಗೇರಾ, ರಾಮಚಂದ್ರ ಹಚರಡ್ಡಿ, ಡಾ.ವಿಜಯಾನಂದ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.