ADVERTISEMENT

ವಸತಿ ನಿಲಯದಲ್ಲಿ ನೂತನ ಶೌಚಾಲಯ ನಿರ್ಮಾಣ

ವರದಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 5:33 IST
Last Updated 5 ಜನವರಿ 2023, 5:33 IST
ಕಕ್ಕೇರಾ ಪಟ್ಟಣದ ವಸತಿ ನಿಲಯದಲ್ಲಿ ಶೌಚಾಲಯ ನಿರ್ಮಿಸಿರುವುದು
ಕಕ್ಕೇರಾ ಪಟ್ಟಣದ ವಸತಿ ನಿಲಯದಲ್ಲಿ ಶೌಚಾಲಯ ನಿರ್ಮಿಸಿರುವುದು   

ಕಕ್ಕೇರಾ: ಪಟ್ಟಣದ ಹೃದಯ ಭಾಗದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಅಧೀನದ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಶೌಚಾಲಯ ನಿರ್ಮಾಣ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ.

ಈ ಕುರಿತು ‘ಹಾಸ್ಟೆಲ್‌ಗೆ ಶೌಚಾಲಯ ಕೊರೆತೆ’ ಶೀರ್ಷಿಕೆಯಡಿ ಡಿಸೆಂಬರ್‌ 24ರಂದು ಪ್ರಜಾವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ‘ವಸತಿ ನಿಲಯದ ಆವರಣದಲ್ಲಿ ಅಪೂರ್ಣಗೊಂಡಿದ್ದ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ’ ಎಂದು ವಸತಿ ನಿಲಯದ ವಾರ್ಡನ್‌ ಹಣಮಂತ ತಿಳಿಸಿದರು.

‘1998ರಲ್ಲಿ ಹಾಸ್ಟೆಲ್‌ ನಿರ್ಮಾಣ ಮಾಡುವಾಗಲೇ ಶೌಚಾಲಯವನ್ನೂ ಕಟ್ಟಲಾಗಿತ್ತು. ಆದರೆ ನಿಲಯದ ಕಾಂಪೌಂಡ್‌ ಕಾಮಗಾರಿ ವೇಳೆ ಶೌಚಾಲಯವನ್ನು ಬಂದ್‌ ಮಾಡಲಾಗಿತ್ತು. ಇದಾದ ನಂತರ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯವಾಗಿತ್ತು. ಪತ್ರಿಕೆಯಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ಶೌಚಾಲಯ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.