ADVERTISEMENT

ಪಲ್ಲಾಸ್‌ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ನಾಳೆ

ನೂತನ ಆಸ್ಪತ್ರೆಯಲ್ಲಿ ಲೇಜರ್ ಶಸ್ತ್ರ ಚಿಕಿತ್ಸೆ ಬಳಕೆ: ಡಾ. ಪಲ್ಲಾ ಅಭಿಷೇಕರೆಡ್ಡಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 16:40 IST
Last Updated 24 ನವೆಂಬರ್ 2020, 16:40 IST
ಡಾ. ಪಲ್ಲಾ ಅಭಿಷೇಕರೆಡ್ಡಿ
ಡಾ. ಪಲ್ಲಾ ಅಭಿಷೇಕರೆಡ್ಡಿ   

ಯಾದಗಿರಿ: ‘ನಗರದ ಅಮರ ಲೇಔಟ್‌ನಲ್ಲಿ ಪಲ್ಲಾಸ್‌ ಮಲ್ಟಿ ಸ್ಪೆಷಲಿಸ್ಟ್‌ಆಸ್ಪತ್ರೆ ಉದ್ಘಾಟನೆ ಸಮಾರಂಭ ನವೆಂಬರ್ 26ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ’ ಎಂದು ಆಸ್ಪತ್ರೆಯ ಡಾ. ಪಲ್ಲಾ ಅಭಿಷೇಕರೆಡ್ಡಿ ಹೇಳಿದರು.

‘ಕಾರ್ಯಕ್ರಮಕ್ಕೆ ಗುರುಮಠಕಲ್ ಖಾಸಾ ಮಠದ ಪೀಠಾಧಿಪತಿ ಶಾಂತವೀರ ಸ್ವಾಮೀಜಿ, ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ನಾಗನಗೌಡ ಕಂದಕೂರ, ಮಾಜಿ ಶಾಸಕರಾದ ಡಾ.ಎ.ಬಿ.ಮಾಲಕರೆಡ್ಡಿ, ಡಾ.ವೀರಬಸವಂತರೆಡ್ಡಿ ಮುದ್ನಾಳ, ಡಾ.ಎಸ್‌ವೀರಭದ್ರಪ್ಪ ಅವರು ಆಗಮಿಸಲಿದ್ದಾರೆ’ ಎಂದು ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕರ್ನಾಟಕದ ಆಸ್ಪತ್ರೆಗಳಲ್ಲಿ ಲೇಜರ್ ಶಸ್ತ್ರ ಚಿಕಿತ್ಸೆ ಲಭ್ಯವಿಲ್ಲ. ಜಿಲ್ಲೆಯ ಜನರು ಮೂಲವ್ಯಾಧಿ, ಫಿಸ್ತೂಲಾ ಇನ್ನಿತರ ರೋಗಗಳ ಶಸ್ತ್ರಚಿಕಿತ್ಸೆಗಾಗಿ ದೂರದ ಹೈದರಾಬಾದ್, ಬೆಂಗಳೂರು, ಸೊಲ್ಲಾಪುರ ನಗರದ ಆಸ್ಪತ್ರೆಗಳಿಗೆ ತೆರಳುತ್ತಾರೆ. ಹೀಗಾಗಿ ನಮ್ಮಲ್ಲಿಯೇ ಆ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ’ ಎಂದರು.

‘ಶಸ್ತ್ರಚಿಕಿತ್ಸಾ ವೈದ್ಯನಾಗಿ ಕಲಬುರ್ಗಿಯ ಸರ್ಕಾರಿ ಜಿಮ್ಸ್ ಹಾಗೂ ಚಿರಾಗ್ ಆಸ್ಪತ್ರೆಯಲ್ಲಿ 2 ವರ್ಷ, ಬೆಂಗಳೂರು, ಗುರುಗಾಂವ್ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದೇನೆ. ಯಾದಗಿರಿ, ಗುರುಮಠಕಲ್, ಶಹಾಪುರ ಆಸ್ಪತ್ರೆಗಳಲ್ಲಿ 2 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ’ ಎಂದು ತಿಳಿಸಿದರು.

‘ಮುಂದಿನ ವರ್ಷದಲ್ಲಿ ಸ್ನೇಹಿತ ವೈದ್ಯರ ಸಹಕಾರದಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಹಮ್ಮಿಕೊಳ್ಳುವ ಯೋಜನೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಡಾ. ಪಲ್ಲಾ ಪೂರ್ಣಿಮಾ, ಜಗನ್ನಾಥರೆಡ್ಡಿ ಸಂಬರ್, ಪಲ್ಲಾ ಲಕ್ಷ್ಮೀಕಾಂತರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.