ಯಾದಗಿರಿ: ‘ಆರೋಗ್ಯ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್ ಅವರ ಪಾತ್ರ ಅತಿಮಹತ್ವದ್ದಾಗಿದೆ’ ಎಂದು ಜಿಪಂ ಸಿಇಒ ಲವೀಶ್ ಓರ್ಡಿಯಾ ಹೇಳಿದರು.
ನಗರದ ಡಿಎಚ್ಒ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಸಣ್ಣಪುಟ್ಟ ರೋಗಗಳಿಗೆ ಇವರೇ ಪ್ರಥಮ ಚಿಕಿತ್ಸಾಕಾರರಾಗಿರುತ್ತಾರೆ. ಇದರಿಂದಾಗಿ ಆರೋಗ್ಯ ಸಂಸ್ಥೆಯ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿರುವುದು ಒಳ್ಳೆಯ ಸಂಗತಿ’ ಎಂದರು.
ಜಿಲ್ಲಾ ಸರ್ಜನ್ ಡಾ.ರಿಜ್ವಾನ್ ಆಫ್ರೀನ್ ಮಾತನಾಡಿ, ‘ಜನರ ಆರೋಗ್ಯ ಕಾಪಾಡುವಲ್ಲಿ ಫಾರ್ಮಸಿ ಅಧಿಕಾರಿಗಳ ಹೊಣೆಗಾರಿಕೆಯೂ ಕೂಡ ಅಷ್ಟೇ ಮುಖ್ಯವಾಗಿದೆ. ವೈಜ್ಞಾನಿಕ ಔಷಧಿಗಳ ಬೇಡಿಕೆಯನ್ನು ಸಲ್ಲಿಸಬೇಕು ಮತ್ತು ಅವುಗಳನ್ನು ಹಾಳಾಗಂತೆಯೇ ನೋಡಿಕೊಳ್ಳಬೇಕು’ ಎಂದರು.
ಡಿಎಚ್ಒ ಡಾ.ಮಹೇಶ ಬಿರಾದಾರ ಮಾತನಾಡಿ, ‘ನಮ್ಮಲ್ಲಿ ಬರುವ ರೋಗಿಗಳನ್ನು ಗೌರವದಿಂದ ನೋಡಿಕೊಂಡು ಅವರ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚುವಂತೆ ನೋಡಕೊಳ್ಳಬೇಕು. ಪ್ರತಿಯೊಬ್ಬರು ಆರೋಗ್ಯ ಕಾಪಾಡುವಲ್ಲಿ ವಿಶೇಷ ಕಾಳಜಿ ವಹಿಸಬೇಕು’ ಎಂದರು.
ಸೇವಾ ನಿವೃತ್ತಿ ಹೊಂದಿದ ನಿರ್ಮಲಾ, ಪ್ರಕಾಶ ನೆಲ್ಲಗಿ, ಮಹ್ಮದ್ ಅಲಿ, ಶಾಂತಕುಮಾರ ಮತ್ತು ಫಾರ್ಮಸಿ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮಹ್ಮದ್ ಇಲಿಯಾಸ್, ಭೀಮನಗೌಡ ಅವರನ್ನು ಸನ್ಮಾನಿಸಲಾಯಿತು.
ಆರೋಗ್ಯ ಇಲಾಖೆ ಡಾ.ಶರಣಬಸಪ್ಪ ಗಣಜಲಖೇಡ, ಡಾ.ಎಂ.ಎಸ್. ಪಾಟೀಲ, ಡಾ.ಸಂಜೀವಕುಮಾರ, ಡಾ.ಮಲ್ಲಪ್ಪ, ಡಾ.ಪದ್ಮಾನಂದ, ಡಾ.ಜ್ಯೋತಿ ಕಟ್ಟಿಮನಿ, ಡಾ.ರಾಜಾ ವೆಂಕಟಪ್ಪ ನಾಯಕ್, ಡಾ.ಹಣಮಂತರೆಡ್ಡಿ, ಜಿಲ್ಲಾ ಫಾರ್ಮಸಿಸ್ಟ್ ಸಂಘದ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.