ಸುರಪುರ: ‘ನಮ್ಮ ಧ್ವಜ ಸತ್ಯ, ನ್ಯಾಯ ಮತ್ತು ಸಮಾನತೆ ತತ್ವ ಮತ್ತು ವೈವಿಧ್ಯವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಬಣ್ಣವು ನಮ್ಮ ಸಂಸ್ಕೃತಿ ಮತ್ತು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಮುಖ್ಯ ಶಿಕ್ಷಕ ಸೋಮರಡ್ಡಿ ಮಂಗಿಹಾಳ ಹೇಳಿದರು.
ನಗರದ ದರಬಾರ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ರಾಷ್ಟ್ರಧ್ವಜವನ್ನು ಮೊದಲ ಬಾರಿ 1947 ಜುಲೈ 22ರಂದು ನಡೆದ ಸಂವಿಧಾನ ಸಭೆಯಲ್ಲಿ ಅಂಗೀಕರಿಸಲಾಯಿತು. ಇದರ ಸ್ಮರಣಾರ್ಥವಾಗಿ ಪ್ರತಿ ವರ್ಷ ಜುಲೈ 22ರಂದು ರಾಷ್ಟ್ರೀಯ ಧ್ವಜ ದಿನ ಆಚರಿಸಲಾಗುತ್ತದೆ’ ಎಂದರು.
‘ಆಂಧ್ರಪ್ರದೇಶದ ಪಿಂಗಾಲಿ ವೆಂಕಯ್ಯ ಅವರು ರಾಷ್ಟ್ರಧ್ವಜವನ್ನು ವಿನ್ಯಾಸ ಮಾಡಿದರು. ರಾಷ್ಟ್ರೀಯ ಧ್ವಜ ದಿನವನ್ನು ದೇಶದೆಲ್ಲಡೆ ಆಚರಿಸುವ ಮೂಲಕ ಧ್ವಜದ ಇತಿಹಾಸ ಮತ್ತು ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಪ್ರತೀ ದೇಶವಾಸಿಯ ಹೆಮ್ಮೆಯ ಪ್ರತೀಕವಾದ ರಾಷ್ಟ್ರೀಯ ಧ್ವಜವನ್ನು ಸದಾ ಗೌರವಿಸಬೇಕು. ರಾಷ್ಟ್ರಭಕ್ತಿಯನ್ನು ವ್ಯಕ್ತಪಡಿಸಬೇಕು’ ಎಂದರು.
ಸಹಶಿಕ್ಷಕರಾದ ಶ್ರೀಶೈಲ ಯಂಕಂಚಿ, ಜೋಗಪ್ಪ ಜೋಗಾರ, ಶರಣಯ್ಯ ಸ್ಥಾವರಮಠ, ಶರಣು ಪಾಕರೆಡ್ಡಿ, ಗೌರಮ್ಮ, ಸುಜಾತಾ, ಮೇಘಾ, ವೆಂಕಟೇಶ ಅಯ್ಯ, ವೆಂಕಟೇಶ ಗಿರಣಿ, ಎಂ. ಕೃಷ್ಣಕಾಂತ, ಸುರೇಶ್, ಅರುಣಚಂದ್ರ ನಾಯಕ, ಪವಿತ್ರಾ, ದುರ್ಗಮ್ಮ, ಮಲ್ಲಮ್ಮ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನಿಂಗಪ್ಪ ಪೂಜಾರಿ, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.