ADVERTISEMENT

ಕಕ್ಕೇರಾ | ಪೂಲಬಾವಿ ಬಲಭೀಮೇಶ್ವರ ಸಂಭ್ರಮದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 7:22 IST
Last Updated 16 ಡಿಸೆಂಬರ್ 2025, 7:22 IST
ಕಕ್ಕೇರಾ ಸಮೀಪದ ಪೂಲಭಾವಿ ಗ್ರಾಮದ ಬಲಭೀಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಅದ್ದೂರಿ ರಥೋತ್ಸವ ಜರುಗಿತು. ಭೀಮಣ್ಣ ಮುತ್ಯಾ ಸೇರಿದಂತೆ ಅನೇಕರು ಹಾಜರಿದ್ದರು
ಕಕ್ಕೇರಾ ಸಮೀಪದ ಪೂಲಭಾವಿ ಗ್ರಾಮದ ಬಲಭೀಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಅದ್ದೂರಿ ರಥೋತ್ಸವ ಜರುಗಿತು. ಭೀಮಣ್ಣ ಮುತ್ಯಾ ಸೇರಿದಂತೆ ಅನೇಕರು ಹಾಜರಿದ್ದರು   

ಕಕ್ಕೇರಾ: ಸಮೀಪದ ಪೂಲಬಾವಿ ಗ್ರಾಮದ ಬಲಭೀಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಸಂಜೆ ಸಾವಿರಾರು ಭಕ್ತರ ಮಧ್ಯೆ ರಥೋತ್ಸವ ಜರುಗಿತು.

ಶನಿವಾರ ಸಂಜೆ ಗಂಗಸ್ಥಳ. ಕಬಡ್ಡಿ ಪಂದ್ಯಾವಳಿಗಳು ಜರುಗಿದವು. ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಥೆ, ಭಾನುವಾರ ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಸಂಜೆ ರಥೋತ್ಸವ ಜರುಗಿತು. ವಿವಿಧ ಪೂಜ್ಯರು, ಜನಪ್ರತಿನಿಧಿಗಳು, ಪುರಸಭೆ ಸದಸ್ಯರು, ಸಂಘ ಸಂಸ್ಥೆಯ ಪದಾಧಿಕಾರಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಹಾಜರಿದ್ದರು.

ನಂದಪ್ಪ ಪೂಲಭಾವಿ, ಕಸಾಪ ಅಧ್ಯಕ್ಷ ಗವಿಸಿದ್ದೇಶ ಹೊಗರಿ, ಪೂಜಪ್ಪ ದೊರೆ, ಲಕ್ಷ್ಮಣ ಪೂಲಭಾವಿ, ಪೂಜಪ್ಪ ಗೋನಟ್ಲ, ಸಂಗಪ್ಪ ಪೂಲಭಾವಿ, ಗಂಗಪ್ಪ ಗೋಲಪಲ್ಲಿ, ವೆಂಕಟೇಶ ಡೊಳ್ಳಿನ್, ಸೋಮಣ್ಣ ಪೂಲಭಾವಿ ಸೇರಿದಂತೆ ಅನೇಕರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.