ADVERTISEMENT

ಯಾದಗಿರಿ | ಪ್ಯಾಸೆಂಜರ್ ರೈಲು ಪುನಾರಂಭಕ್ಕೆ ಒತ್ತಾಯ

ರಾಯಚೂರು-ಯಾದಗಿರಿ–ಕಲಬುರಗಿ ನೂತನ ಸಂಸದರಲ್ಲಿ ಪ್ರಯಾಣಿಕರು ಮನವಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:53 IST
Last Updated 28 ಜುಲೈ 2024, 15:53 IST
<div class="paragraphs"><p>ರೈಲು (ಪ್ರಾತಿನಿಧಿಕ ಚಿತ್ರ)</p></div>

ರೈಲು (ಪ್ರಾತಿನಿಧಿಕ ಚಿತ್ರ)

   

ಯಾದಗಿರಿ: ಕೋವಿಡ್‌ ವೇಳೆ ರದ್ದಾಗಿದ್ದ ಕಲಬುರಗಿ-ಗುಂತಕಲ್ ಇಂಟರ್ ಸಿಟಿ ಪ್ಯಾಸೆಂಜರ್ ರೈಲುನ್ನು ಪುನಾರಂಭ ಮಾಡಬೇಕು ಎಂದು ಜಿಲ್ಲೆಯ ಪ್ರಯಾಣಿಕರು ರಾಯಚೂರು- ಯಾದಗಿರಿ ಮತ್ತು ಕಲಬುರಗಿಯ ನೂತನ ಸಂಸದರಲ್ಲಿ ಮನವಿ ಮಾಡಿಕೊಂಡಿದ್ದಾರೆ.

3 ವರ್ಷ ಕಳೆದರೂ ಈ ರೈಲು ಪುನಾರಂಭವಾಗಿಲ್ಲ. ಇದರಿಂದ ಕಲಬುರಗಿ, ಶಹಾಬಾದ್‌, ವಾಡಿ, ನಾಲವಾರ, ಯಾದಗಿರಿ, ಸೈದಾಪುರ, ರಾಯಚೂರು, ಮಂತ್ರಾಲಯ ಪ್ರತಿದಿನ ಪ್ರಯಾಣ ಮಾಡುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಸುಕ್ಷೇತ್ರ ದೇವಸೂಗೂರ (ಶಕ್ತಿನಗರ) ಸೂಗೂರೇಶ್ವರ ದೇವಸ್ಥಾನ, ಸುಕ್ಷೇತ್ರ ಮಂತ್ರಾಲಯದ ಗುರು ರಾಘವೇಂದ್ರಸ್ವಾಮಿ ದೇವಾಲಯ ಹೀಗೆ ಹಲವು ಧಾರ್ಮಿಕ ದೇವಸ್ಥಾನಗಳು ಇರುವುದರಿಂದ ಭಕ್ತರು ಕುಟುಂಬ ಪರಿವಾರ ಸಮೇತ ಕೂಡ ಪ್ರಯಾಣ ಮಾಡುತ್ತಾರೆ.

ADVERTISEMENT

ಅಲ್ಲದೆ ರಾಯಚೂರು, ಕಲಬುರಗಿ ಆಸ್ಪತ್ರೆಗಳಿಗೆ ಹೋಗಿ ಬರಲು ಜನರಿಗೆ ಅವಶ್ಯಕವಾಗಿದೆ. ಇನ್ನೂ ದಿನನಿತ್ಯ ಪ್ರಯಾಣಿಸುವ ಸರ್ಕಾರಿ ನೌಕರರಿಗೂ ಈ ಪ್ಯಾಸೇಂಜರ್ ಬಹಳ ತುಂಬಾ ಉಪಯುಕ್ತವಾಗಿದೆ. ಆದ್ದರಿಂದ ನೂತನ ಈ ಭಾಗದ ನೂತನ ಇಬ್ಬರೂ ಸಂಸದರು ಕೇಂದ್ರ ರೈಲ್ವೆ ಸಚಿವರು ಮತ್ತು ರೈಲ್ವೆ ಅಧಿಕಾರಿಗಳ ಮೇಲೆ ಒತ್ತಡ ತಂದು ಕೋವಿಡ್‌ ವೇಳೆ ರದ್ದಾದ ಕಲಬುರಗಿ-ರಾಯಚೂರು-ಗುಂತಕಲ್ ಪ್ಯಾಸೆಂಜರ್ ಇಂಟರ್ ಸಿಟಿ ರೈಲನ್ನು ಪುನಾರಂಭಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಯಚೂರು-ಯಾದಗಿರಿ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರದ ನೂತನ ಸಂಸದ ಜಿ.ಕುಮಾರ ನಾಯಕ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಲ್ಲಿ ಜಿಲ್ಲೆಯ ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ. ಈ ರೈಲು ಪುನಾರಂಭ ಮಾಡಿದರೆ, ಬಡ ಪ್ರಯಾಣಿಕರು, ವ್ಯಾಪಾರಸ್ಥರಿಗೂ ತುಂಬಾ ಉಪಯೋಗವಾಗಲಿದೆ ಎಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.

'ಕಲಬುರಗಿ – ಗುಂತಕಲ್ ಇಂಟರ್ ಸಿಟಿ ಪ್ಯಾಸೆಂಜರ್ ರೈಲು ಕೋವಿಡ್‌ ವೇಳೆ ರದ್ದಾಗಿದೆ. ರಾಯಚೂರು ಮತ್ತು ಕಲಬುರಗಿ ನೂತನ ಸಂಸದರು ಕೇಂದ್ರ ಸಚಿವ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದು ಪ್ಯಾಸೆಂಜರ್ ರೈಲನ್ನು ಪುನಾರಂಭಿಸಬೇಕು. ಪ್ರಯಾಣಿಕರಿಗೆ ಅನುಕೂಲ ಮಾಡಿಕೋಡಬೇಕು’ ಎಂದು ಪ್ರಯಾಣಿಕ ನಿಂಗಪ್ಪ ಯಾದಗಿರಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.