ADVERTISEMENT

ಯರಗೋಳ: ಮಳೆಯಿಂದಾಗಿ ಮನೆ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 3:10 IST
Last Updated 12 ಜುಲೈ 2021, 3:10 IST
ವೆಂಕಟೇಶ ನಗರ ದೊಡ್ಡ ತಾಂಡಾದಲ್ಲಿ ಮನೆ ಕುಸಿದಿದೆ
ವೆಂಕಟೇಶ ನಗರ ದೊಡ್ಡ ತಾಂಡಾದಲ್ಲಿ ಮನೆ ಕುಸಿದಿದೆ   

ಯರಗೋಳ: ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ರಾತ್ರಿಯಿಂದ ಜೋರಾದ ಮಳೆ ಸುರಿಯುತ್ತಿದೆ.

ಅಲ್ಲಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟೇಶ ನಗರ (ದೊಡ್ಡ ತಾಂಡಾ) ನಿವಾಸಿ ತಾರಿಬಾಯಿ ಅವರ ಮನೆಯ ಗೋಡೆ ಕುಸಿದಿದೆ. ಮನೆಯಲ್ಲಿದ್ದ ಧಾನ್ಯಗಳು ಹಾಳಾಗಿವೆ.

ಹೊನಗೇರಾ ಗ್ರಾಮದ ವಾರ್ಡ್‌ ಸಂಖ್ಯೆ 1 ರಲ್ಲಿ ಹಳ್ಳದ ನೀರು ಹರಿದು ಬರುತ್ತಿದ್ದು ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶರಣು ಎಮ್ಮೆನೂರು ತಿಳಿಸಿದರು.

ADVERTISEMENT

ಮುದ್ನಾಳ, ಠಾಣಗುಂದಿ, ಬೊಮ್ಮಚಟ್ನಳ್ಳಿ, ಮಲಕಪ್ಪನಳ್ಳಿ, ವಡ್ನಳ್ಳಿ, ಎಸ್.ಹೊಸಳ್ಳಿ, ಮೋಟ್ನಳ್ಳಿ, ಕೋಟಗೇರಾ, ಚಿಂತಕುಂಟ, ಹೆಡಗಿಮದ್ರ, ಹೊನಗೇರಾ, ಹತ್ತಿಕುಣಿ, ಸಮಣಪುರ, ಬಂದಳ್ಳಿ, ಯಡ್ಡಳ್ಳಿ, ಚಾಮನಳ್ಳಿ, ಬೆಳಗೇರಾ, ಖಾನಳ್ಳಿ, ಅರಿಕೇರಾ .ಬಿ, ಬಸವಂತಪುರ, ಕ್ಯಾಸಪನಳ್ಳಿ, ಹೋರುಣಚ, ಅಚ್ಚೋಲ, ಗುಲಗುಂದಿ, ಕಂಚಗಾರ ಹಳ್ಳಿ, ಅಬ್ಬೆತುಮಕೂರು, ಬಾಚವಾರ, ಕಟ್ಟಿಗೆ ಶಾಹಾಪುರ ಗ್ರಾಮಗಳಲ್ಲಿ ರವಿವಾರ ಬೆಳಿಗ್ಗೆ ತುಂತುರು ಮಳೆ ಸುರಿದಿದೆ.

ಹಳ್ಳಗಳಲ್ಲಿ ನೀರು ಹರಿಯತ್ತಿದೆ. ಹೊಲ, ಗದ್ದೆಗಳಲ್ಲಿ ನೀರು ನಿಂತಿದ್ದು, ಹತ್ತಿ, ಭತ್ತ, ಹೆಸರು ಬೆಳೆಗಳಿಗೆ ಮಳೆ ಆಸರೆಯಾಗಿದೆ. ರೈತರ ಮೊಗದಲ್ಲಿ ಸಂತಸ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.