ADVERTISEMENT

ಸುರಪುರ: ವಿವಿಧೆಡೆ ರಾಮನವಮಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 6:40 IST
Last Updated 31 ಮಾರ್ಚ್ 2023, 6:40 IST
ಸುರಪುರದ ಮಧ್ವಮಂಟಪದಲ್ಲಿ ಗುರುವಾರ ರಾಮನವಮಿ ಅಂಗವಾಗಿ ಏರ್ಪಡಿಸಿದ್ದ ಪವಮಾನ ಹೋಮದ ಪೂರ್ಣಾಹುತಿ ಜರುಗಿತು
ಸುರಪುರದ ಮಧ್ವಮಂಟಪದಲ್ಲಿ ಗುರುವಾರ ರಾಮನವಮಿ ಅಂಗವಾಗಿ ಏರ್ಪಡಿಸಿದ್ದ ಪವಮಾನ ಹೋಮದ ಪೂರ್ಣಾಹುತಿ ಜರುಗಿತು   

ಸುರಪುರ: ನಗರದ ಮಧ್ವ ಮಂಟಪದಲ್ಲಿ ರಾಮ ನವಮಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆ ಕಾತ್ಯಾಯನಿ ಭಜನಾ ಮಂಡಳಿ ಅವರಿಂದ ನಗರ ಸಂಕೀರ್ತನೆ ಜರುಗಿತು.

ಶ್ರೀರಾಮದೇವರಿಗೆ ವಿಶೇಷ ಪೂಜೆ, ತೊಟ್ಟಿಲು ಸೇವೆ, ಅಭಿಷೇಕ, ಶ್ರೀರಾಮ ರಕ್ಷಾ ಸ್ತೋತ್ರ ಪಠಣ ಜರಗಿದವು. ಭಜನಾ ಮಂಡಳಿ ಸದಸ್ಯರು ತಾರತಮ್ಯದ ಭಜನೆ ಮಾಡಿದರು. ಪವಮಾನ ಹೋಮ ಜರುಗಿತು. ತೀರ್ಥ, ಪ್ರಸಾದ ವಿನಿಯೋಗಿಸಲಾಯಿತು. ಅನ್ನಸಂತರ್ಪಣೆ ಜರುಗಿತು.

ಭೀಮಸೇನಾಚಾರ್ಯ ಜೋಷಿ ಮಂಗಳೂರ ಉಪನ್ಯಾಸ ನೀಡಿದರು.

ADVERTISEMENT

ನರಸಿಂಹಾಚಾರ್ಯ ಜೋಷಿ, ಮಲ್ಹಾರಾವ ಸಿಂಧಗೇರಿ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ಲಕ್ಷ್ಮೀಕಾಂತ ಅಮ್ಮಾಪುರ, ರಮೇಶ ಕುಲಕರ್ಣಿ, ಚಂದ್ರಕಾಂತ ನಾಡಗೌಡ, ಗುಂಡುರಾವ ಅರಳಹಳ್ಳಿ ದತ್ತುರಾವ ಏವೂರ, ಶ್ರೀನಿವಾಸ ಪ್ರತಿನಿಧಿ, ಪ್ರಾಣೇಶರಾವ ಬೋನಾಳ, ಶ್ರೀನಿವಾಸ ದೇವಡಿ, ಭೀಮಾಶಂಕರ ದೇಶಪಾಂಡೆ, ನವೀನ ಸಿಂಧಗೇರಿ, ವೆಂಕಟೇಶ ರಾಯನಪಾಳ್ಯ, ಗಿರೀಶ ಮುನ್ನಳ್ಳಿ ಇತರರು ಇದ್ದರು.

ಶ್ರೀರಾಮ ದೇವರ ಗುಡಿ: ಪುರಾತನ ಶ್ರೀರಾಮ ದೇವರ ಗುಡಿಯಲ್ಲಿ ರಾಮ ನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀರಾಮ. ಸೀತೆ, ಲಕ್ಷ್ಮಣ, ಹನುಮ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.

ವೇಣುಗೋಪಾಲ ಭಜನಾ ಮಂಡಳಿ ಅವರಿಂದ ದೇವರ ನಾಮ ಹಾಡುಗಾರಿಕೆ ನಡೆಯಿತು. ವೇದವ್ಯಾಸಾಚಾರ್ಯ ಜೋಷಿ ಪ್ರವಚನ ನೀಡಿದರು.

ನಗರಸಭೆ ಸದಸ್ಯ ನರ ಸಿಂಹಕಾಂತ ಪಂಚಮಗಿರಿ ಅವರು ಭಕ್ತರಿಗೆ ಉಪಹಾರ, ಪಾನಕ, ಕೋಸಂಬರಿ ವಿತರಿಸಿದರು.
ಪ್ರಧಾನ ಅರ್ಚಕ ರಘುಪತಿ ರಾಮಚಂದ್ರ ಪುರೋಹಿತ, ಪ್ರಶಾಂತ ಪುರೋಹಿತ ಪೂಜಾ ಕೈಂಕರ್ಯ
ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.