ಪ್ರಜಾವಾಣಿ ವಾರ್ತೆ
ನಾರಾಯಣಪುರ: ಸಮೀಪದ ರಾಯನಗೋಳ ಸೀಮೆಯ ಕೋಟೆಗುಡ್ಡ ಹತ್ತಿರದ ಸಿಂಧೂರ ಲಕ್ಷ್ಮಣ ಕೇರಿಯ ಮಾಲಿಗೌಡ್ರ ಗಡ್ಡಿಯಲ್ಲಿ ಗದ್ದೆಮ್ಮ ದೇವಿ ಆರಾಧನಾ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಸತ್ಯಶಿವ ದೇವಸ್ಥಾನದ ಆವರಣದಲ್ಲಿ ಜರುಗಿದ ಆರಾಧನೆ ಮಹೋತ್ಸವ ಹಾಗೂ ದೇವಿಯ ಅಹೋರಾತ್ರಿ ಮೆರವಣಿಗೆಯಲ್ಲಿ ಸುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು, ಡೊಳ್ಳಿನ ಕುಣಿತ ಸೇರಿದಂತೆ ವಿವಿಧ ಪೂಜೆ, ಭಜನೆಯನ್ನು ನೆರವೇರಿಸಿದರು.
ಟಗರಿನ ಕಾಳಗ ಮತ್ತು ಗುಂಡುಕಲ್ಲು ಎತ್ತುವ ಸ್ಪರ್ಧೆಗೆ ಮುಖಂಡ ರಾಜಾ ಜಿತೇಂದ್ರನಾಯಕ ಜಹಗಿರದಾರ ಚಾಲನೆ ನೀಡಿದರು.
ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಭೀಮಣ್ಣ ಬಳಬಟ್ಟಿ ಪ್ರಥಮ, ನಾಗರಾಜ ಮನ್ಯಾಳ ದ್ವಿತೀಯ ಸ್ಥಾನ ಪಡೆದರು. ಟಗರುಗಳು ಕಾಳಗದಲ್ಲಿ ವಿಜೇತವಾರದ ಟಗರುಗಳಿಗೆ ಬಹುಮಾನ ವಿತರಿಸಲಾಯಿತು.
ರಮೇಶ ಯಾದವ,
ರಮೇಶ ಗೌಡರ, ರಮೇಶ ಕೋಳುರ, ಮಧು ಹಿರೇಮಠ, ಶೇಖರಯ್ಯ ಹಿರೇಮಠ, ದುರಗಪ್ಪ ಗಡ್ಡಿ, ಜಟ್ಟೆಪ್ಪ ಗೊಳಸಂಗಿ, ಅಂಬ್ರೇಷ ಬೈಲಕೂರ, ಯಲ್ಲಪ್ಪ ಶಿರೋಳ, ಯಮನಪ್ಪ ಗಡ್ಡಿ, ಗುಂಡು ರಾಠೋಡ, ಚಂದಪ್ಪ, ಹುಲಗಪ್ಪ, ಗದ್ದೆಪ್ಪ, ಪರಸಪ್ಪ, ಭೀಮಣ್ಣ, ಸೋಮಣ್ಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ದೇವಿ ಭಕ್ತರು
ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.