
ಸುರಪುರ: ‘ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಪರಮೋಚ್ಛ ಗ್ರಂಥ. ನಾನೇನಾದರು ಶಾಸಕನಾಗಿದ್ದರೆ ಅದು ಸಂವಿಧಾನದ ಪ್ರತಿಫಲ. ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕು’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.
ನಗರದ ಪ್ರಭು ಕಾಲೇಜು ಮೈದಾನದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಜನಪರವಾದ ಸರ್ಕಾರವಿದೆ. ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಆರೋಗ್ಯ ಮತ್ತು ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ಕೊಟ್ಟಿದೆ. ಬಡವರ ದೀನ ದಲಿತರ ಶೋಷಿತರ ಪರವಾಗಿದೆ’ ಎಂದರು.
ಧ್ವಜಾರೋಹಣ ಮಾಡಿದ ತಹಶೀಲ್ದಾರ್ ಎಚ್.ಎ. ಸರಕಾವಸ್ ಮಾತನಾಡಿದರು.
ಕಾರ್ಯಕ್ರಮಕ್ಕೆ ಮೊದಲು ಪೊಲೀಸ್, ಗೃಹರಕ್ಷಕ ದಳ ಮತ್ತು ಎನ್‍ಸಿಸಿ ತಂಡದ ವತಿಯಿಂದ ಕವಾಯಿತು ನಡೆಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶ್ರೀನಿವಾಸ ಜಾಲವಾದಿ (ಸಾಹಿತ್ಯ), ಹಣಮಂತ ಯರಗೋಳ, ನಿಂಗಪ್ಪ ಭೋವಿ (ಸಂಗೀತ), ವಿನೋದನಾಯಕ (ಕೃಷಿ) ಹೊನ್ನಪ್ಪ ತೇಲ್ಕರ್, ಗಿರೀಶ ಬ್ಯಾಕೋಡ್ ಮಾಧ್ಯಮ), ಅಜಯ ಬೇಟೆಗಾರ (ಕ್ರೀಡೆ) ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ, ಡಿವೈಎಸ್‍ಪಿ ಜಾವೇದ್ ಇನಾಂದಾರ, ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್, ಪೌರಾಯುಕ್ತ ಬಸವರಾಜ ಟಣಕೆದಾರ, ಪಿಐ ಉಮೇಶನಾಯಕ, ಪಿ.ಡಬ್ಲು.ಡಿ. ಎಇಇ ಎಸ್.ಜಿ. ಪಾಟೀಲ, ಸಿಡಿಪಿಒ ಲಾಲಸಾಹೇಬ ಪೀರಾಪುರ, ಉಪ ಖಜಾನೆ ಅಧಿಕಾರಿ ಸಣ್ಣಕ್ಕೆಪ್ಪ ಕೊಂಡಿಕಾರ, ಮುಂಖಡರಾದ ಮಲ್ಲಣ್ಣ ಸಾಹು ಮುಧೋಳ, ರಾಜಾ ಪಿಡ್ಡನಾಯಕ, ಪ್ರಕಾಶ ಗುತ್ತೇದಾರ, ನಿಂಗಪ್ಪ ಬಾಚಿಮಟ್ಟಿ, ಸುವರ್ಣ ಎಲಿಗಾರ, ರಮೇಶ ದೊರೆ, ಭೀರಲಿಂಗ ಬಾದ್ಯಾಪುರ, ಬಸನಗೌಡ ದೇವಾಪುರ ಇತರರು ವೇದಿಕೆಯಲ್ಲಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷರ ದಾಸೋಹ ಅಧಿಕಾರಿ ಪಂಡಿತ ನಿಂಬೂರ ಸ್ವಾಗತಿಸಿದರು. ಮಹಾದೇವಪ್ಪ ಗುತ್ತೇದಾರ, ಲಕ್ಷ್ಮಣನಾಯಕ ನಿರೂಪಿಸಿದರು. ಬಿಆರ್‌ಪಿ ಖಾದರ್ ಪಟೇಲ ವಂದಿಸಿದರು. ನಂತರ ವಿವಿಧ ಶಾಲೆಯ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.