ADVERTISEMENT

‘ಸದಾಶಿವ ವರದಿ ಶಿಫಾರಸು ಮಾಡಿ’

ಮಾದಿಗ ಮೀಸಲಾತಿ ಹೋರಾಟ ರಾಜ್ಯ ಸಮಿತಿ ವತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 6:20 IST
Last Updated 26 ಜುಲೈ 2022, 6:20 IST
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸಲು ಒತ್ತಾಯಿಸಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಮಾದಿಗ ಮೀಸಲಾತಿ ಹೋರಾಟ ರಾಜ್ಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸಲು ಒತ್ತಾಯಿಸಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಮಾದಿಗ ಮೀಸಲಾತಿ ಹೋರಾಟ ರಾಜ್ಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು   

ಯಾದಗಿರಿ:ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸಲು ವಿಳಂಬ ಧೋರಣೆ ಮಾಡುತ್ತಿರುವ ಬಿಜೆಪಿ ಸರ್ಕಾರದ ನೀತಿಯನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಮಾದಿಗ ದಂಡೋರದಿಂದ ಪ್ರತಿಭಟನೆ ನಡೆಸಲಾಯಿತು.

ಮಾದಿಗ ಮೀಸಲಾತಿ ಹೋರಾಟ ರಾಜ್ಯ ಸಮಿತಿ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆಯೂ ಪ್ರತಿಭಟನೆ ಮಾಡಲಾಯಿತು.

ರಾಜ್ಯದಲ್ಲಿ ನಿರಂತರವಾಗಿ 25 ವರ್ಷಗಳಿಂದ ಹೋರಾಟ ನಡೆಸಿದ ಫಲವಾಗಿ ನ್ಯಾ.ಎ.ಜೆ.ಸದಾಶಿವ ಆಯೋಗ ರಚನೆ ಮಾಡಲಾಯಿತು. ಈ ಆಯೋಗ, 6 ವರ್ಷ, 8 ತಿಂಗಳಳು ಸಮಿಕ್ಷೆ ಮಾಡಿ, 2012ರಲ್ಲಿ ಅಂದಿನ ಬಿಜೆಪಿ ಸರ್ಕಾರಕ್ಕೆವರದಿಸಲ್ಲಿಸಿದ್ದಾರೆ. ಜನಸಂಖ್ಯೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಮಾದಿಗ ಮತ್ತು ಉಪಜಾತಿಗಳು ತುಳಿತಕ್ಕೆ ಒಳಗಾಗಿರುವ ಸಮುದಾಯಕ್ಕೆ ಮೀಸಲಾತಿಯಲ್ಲಿ ಒಳಮಿಸಲಾತಿ ಪಾಲನ್ನು ಕೊಡಬೇಕೆಂದು ಒತ್ತಾಯಿಸಿದರು.

ADVERTISEMENT

ರಾಜ್ಯ ಸರ್ಕಾರಕ್ಕೆ ಸದಾಶಿವ ಆಯೋಗದ ವರದಿಯನ್ನು 2012ರಲ್ಲಿ ಸಲ್ಲಿಸಿ, 10 ವರ್ಷಗಳು ಕಳೆದರೂ ಮಾದಿಗ ಸಮುದಾಯದ ಬಗ್ಗೆ ವಿಳಂಬ ಧೋರಣೆಯನ್ನು ಅನುಸರಿಸಿದೆ. ರಾಜ್ಯ ಬಿಜೆಪಿ ಸರ್ಕಾರ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಸಚಿವ ಸಂಪುಟದಲ್ಲಿ ಚರ್ಚಿಸಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ತರಲು ಶೀಘ್ರದಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ದಂಡೋರ ಜಿಲ್ಲಾ ಘಟಕದ ಅಧ್ಯಕ್ಷ ಕಾಶಪ್ಪ ಹೆಗ್ಗಣಗೇರ, ನಗರಸಭೆ ಸದಸ್ಯ ಗಣೇಶ್ ದುಪ್ಪಲ್ಲಿ, ಮಲ್ಲಿಕಾರ್ಜುನ ರಾಮುಸಮುದ್ರ, ಹನುಮಂತ ವಡಿಗೇರಿ, ಶರಣಪ್ಪ ವಡಿಗೇರಿ, ಮಲ್ಲಿಕಾರ್ಜುನ ಬಬಲಾದಿ, ಯೇಸು ಕಿಲ್ಲನಕೇರಾ, ಶರಪ್ಪ ಗೊಂಡೆನೂರ, ರಾಜು ಹೊಸಳ್ಳಿ, ಅರ್ಜುನ ಚಿಗನೂರ, ಮಲ್ಲು ಬಾಳಿಗೇರಿ, ಬಸವರಾಜ ವಡಿಗೇರಿ, ವಿಲ್ಸನ್ ಹಲಗೇರಾ, ಹಣಮಂತ ಗುಡೇನೂರ, ಮಲ್ಲಪ್ಪ,ದೇವು, ನಿಂಗಪ್ಪ ಕಿಲ್ಲನಕೇರಾ, ಬಸಲಿಂಗಪ್ಪ ಕಿಲ್ಲನಕೇರಾ, ಸಾಬಣ್ಣ, ಸಾಬರೆಡ್ಡಿ ಹೆಗ್ಗಣಗೇರಾ, ರಾಜಪ್ಪ ಹೆಗ್ಗಣಗೇರಾ, ಲಕ್ಷ್ಮಣ್ಣ ಚಿಗನೂರ, ಮಂಜುನಾಥ ಮಲ್ಹಾರ, ಅಶೋಕ ಮಧ್ವಾರ, ದೇವರಾಜ ಚಲ್ಹೇರಿ, ದಾವೀದ ಬೆಳಗುಂದಿ, ನಿಂಗಪ್ಪ ಗೊಂದೆನೂರ, ಪರುಶಪ್ಪ ಗೊಂದೆನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.