ADVERTISEMENT

ರಾಜ್ಯ ಮಾಹಿತಿ ಆಯೋಗದಲ್ಲಿ 40,040 ಪ್ರಕರಣ ಬಾಕಿ: ಆಯುಕ್ತ ಡಾ.ಹರೀಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 18:40 IST
Last Updated 10 ಅಕ್ಟೋಬರ್ 2025, 18:40 IST
ಮಾಹಿತಿ ಆಯೋಗ ಕೇಂದ್ರ
ಮಾಹಿತಿ ಆಯೋಗ ಕೇಂದ್ರ   

ಯಾದಗಿರಿ: ‘ರಾಜ್ಯ ಮಾಹಿತಿ ಆಯೋಗದಲ್ಲಿ 40,040 ಪ್ರಕರಣಗಳು ಬಾಕಿ ಇದ್ದು, ಬೆಂಗಳೂರು ನಗರದಲ್ಲೇ 9,211 ಪ್ರಕರಣಗಳಿವೆ’ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ.ಹರೀಶ್ ಕುಮಾರ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಗಾವಿ ಜಿಲ್ಲೆಯಲ್ಲಿ 3,570, ರಾಯಚೂರಿನಲ್ಲಿ 2,220, ಬಾಗಲಕೋಟೆಯಲ್ಲಿ 2,151, ಕೋಲಾರದಲ್ಲಿ 2,103 ಪ್ರಕರಣಗಳು ಉಳಿದಿವೆ. ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ 45 ಪ್ರಕರಣಗಳು ವಿಚಾರಣೆಗಾಗಿ ಕಾದಿವೆ’ ಎಂದರು.

ಮತ್ತೊಬ್ಬ ಆಯುಕ್ತ ಬದ್ರುದ್ದೀನ್ ಕೆ. ಅವರು, ‘ಇಲಾಖೆವಾರು ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಆರ್‌ಟಿಐ ಅರ್ಜಿಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಆರ್‌ಟಿಐ ಅರ್ಜಿಗಳನ್ನು ಕೆಡಿಪಿ ಸಭೆ ವ್ಯಾಪ್ತಿಗೆ ತರಲು ಪತ್ರ ಬರೆಯಲಾಗಿದೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.