ADVERTISEMENT

‘ಕಾಲೇಜು ಜಾಗದಲ್ಲಿ ಪ್ರಜಾಸೌಧ ನಿರ್ಮಿಸಿ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 5:58 IST
Last Updated 24 ಡಿಸೆಂಬರ್ 2025, 5:58 IST
ಶಹಾಪುರ ತಹಶೀಲ್ದಾರ್‌ ಸಿದ್ಧಾರೂಢ ಬನ್ನಿಕೊಪ್ಪ ಅವರಿಗೆ ಮಂಗಳವಾರ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಮನವಿ ಸಲ್ಲಿಸಿದರು
ಶಹಾಪುರ ತಹಶೀಲ್ದಾರ್‌ ಸಿದ್ಧಾರೂಢ ಬನ್ನಿಕೊಪ್ಪ ಅವರಿಗೆ ಮಂಗಳವಾರ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಮನವಿ ಸಲ್ಲಿಸಿದರು   

ಶಹಾಪುರ: ‘ಕಾಲೇಜು ಆವರಣದಲ್ಲಿ ಈಗಾಗಲೇ ಟೌನ್ ಹಾಲ ನಿರ್ಮಿಸಿದ್ದಾರೆ. ವಿವಿಧ ನಾಯಕರ ಪುತ್ಥಳಿ ಸ್ಥಾಪಿಸಿದ್ದಾರೆ. 88 ಎಕರೆ ವಿಶಾಲವಾದ ಜಾಗವಿದೆ. ಪ್ರಜಾಸೌಧ ನಿರ್ಮಾಣಕ್ಕೆ 4 ಎಕರೆ ಜಮೀನು ನೀಡಿದರೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಮಂಗಳವಾರ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಮಂಗಳವಾರ ತಹಶೀಲ್ದಾರ್ ಸಿದ್ದಾರೂಢ ಬನ್ನಿಕೊಪ್ಪ ಅವರಿಗೆ ಮನವಿ ಸಲ್ಲಿಸಿದರು.

‘ಅನವಶ್ಯಕವಾಗಿ ಜನತೆಯ ಹೆಸರಿನಲ್ಲಿ ಕೆಲ ಸಂಘಟನೆ ಮುಖಂಡರು ಧರಣಿ ನಡೆಯಿಸಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಗಾಲು ಹಾಕಿರುವುದು ಸರಿಯಲ್ಲ’ ಎಂದರು.

ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಭೀಮರಾಯ ಹೊಸಮನಿ, ನಾಗಣ್ಣ ಬಡಿಗೇರ, ಶಿವಪುತ್ರ ಜವಳಿ, ಮರೆಪ್ಪ ಕ್ರಾಂತಿ, ಮರೆಪ್ಪ ಕನ್ಯಾಕೊಳ್ಳೂರ, ಚಂದ್ರಕಾಂತ, ಶರಬಣ್ಣ ದೋರನಹಳ್ಳಿ, ಜಯರೆಡ್ಡಿ ಹೊಸಮನಿ, ಶರಣಪ್ಪ ಮದ್ರಕಿ, ಪುರುಷೋತ್ತಮ ಬಬಲಾದ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.