ADVERTISEMENT

ಸೈದಾಪುರ: ಖರ್ಗೆಗೆ ತವರಲ್ಲಿ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 8:46 IST
Last Updated 26 ಮಾರ್ಚ್ 2023, 8:46 IST
ಸೈದಾಪುರ ಪಟ್ಟಣಕ್ಕೆ ನೂತನವಾಗಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪ್ರಥಮ ಭಾರಿಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆಯರವರನ್ನು ಅದ್ಧೂರಿ ಬೈಕ್ ರ್‍ಯಾಲಿ ಮೂಲಕ ಸ್ವಾಗತ ಕೋರಿದರು
ಸೈದಾಪುರ ಪಟ್ಟಣಕ್ಕೆ ನೂತನವಾಗಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪ್ರಥಮ ಭಾರಿಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆಯರವರನ್ನು ಅದ್ಧೂರಿ ಬೈಕ್ ರ್‍ಯಾಲಿ ಮೂಲಕ ಸ್ವಾಗತ ಕೋರಿದರು   

ಸೈದಾಪುರ: ಗುರುಮಠಕಲ್ ಕ್ಷೇತ್ರದಲ್ಲಿ ಸತತ ಎಂಟು ಬಾರಿ ಜಯ ಗಳಿಸಿರುವ ಮಲ್ಲಿಕಾರ್ಜನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆರಿದ ಮೇಲೆ ಪ್ರಥಮ ಬಾರಿಗೆ ಯಾದಗಿರಿ ಜಿಲ್ಲೆಗೆ ಆಗಮಿಸಿದ ಹಿನ್ನಲೆಯಲ್ಲಿ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಬೈಕ್ ರ್‍ಯಾಲಿ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.

ಪಟ್ಟಣದ ಪ್ರತಿ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾನರ್-ಮತ್ತು ಕಟೌಟ್‍ಗಳನ್ನು ರಾರಾಜಿಸುತ್ತಿದ್ದವು. ಕೂಡಲೂರು ಬಸವಲಿಂಗೇಶ್ವರ ದ್ವಾರ ಬಾಗಿಲ ಹತ್ತಿರ ನಿರ್ಮಿಸಿದ್ದ ಹೆಲಿಪ್ಯಾಡ್‍ನಿಂದ ಮುಖ್ಯ ವೇದಿಕೆಯವರೆಗೂ ಸುಮಾರು ಒಂದು ಕೀಲೋ ಮೀಟರ್ ಕಾರ್ಯಕರ್ತರು ಬೈಕ್ ರ್‍ಯಾಲಿ, ಹೂ ಮಳೆ ಸುರಿಯುವ ಮೂಲಕ ಅದ್ಧೂರಿ ಮೆರವಣೆಗೆಯನ್ನು ನಡೆಸಿದರು.

ಕಾರ್ಯಕ್ರಮ ಯಶಸ್ವಿಗೊಳಿಸಿದ ದೋಕಾ: ಕಾಂಗ್ರೆಸ್ ಕಾರ್ಯಾಲಯದ ಅಡಿಗಲ್ಲನ್ನು ತನ್ನ ರಾಜಕೀಯ ಗುರು ಮಲ್ಲಿಕಾರ್ಜುನ ಖರ್ಗೆ ಅವರಿಂದನೇ ಅಡಿಗಲ್ಲು ನಿರ್ಮಿಸಬೇಕೆಂಬ ಹಠಕ್ಕೆ ಬಿದ್ದ ಸೈದಾ‍ಪುರ ಕಾಂಗ್ರೆಸ್‌ ಮುಖಂಡ ಶರಣಕಕುಮಾರ ದೋಕಾ, ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಕಳೆದ ಎರಡು-ಮೂರು ತಿಂಗಳಿನಿಂದ ಕಾರ್ಯಕ್ರಮ ಮುಂದೂಡಲಾಗಿತ್ತು. ಆದರೆ, ಅವರ ಆಸೆಯಂತೆ ಖರ್ಗೆ ಅವರಿಂದ ಅಡಿಗಲ್ಲು ಸ್ಥಾಪಿಸಲು ಯಶಸ್ವಿಯಾದರು.

ADVERTISEMENT

ಒಡನಾಡಿ ಕಾರ್ಯಕರ್ತರನ್ನು ವೇದಿಕೆಯಲ್ಲಿ ನೆನೆದ ಖರ್ಗೆ: ಸೈದಾಪುರ ಪಟ್ಟಣ ಖರ್ಗೆಯವರಿಗೆ ಒಡನಾಡಿಯ ಕೇಂದ್ರವಾಗಿತ್ತು ಎಂಬುದು ದಶಕಗಳ ಹಿಂದೆ ತಮ್ಮ ಜೊತೆಯಲ್ಲಿದ್ದ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಮತ್ತು ಸಾಮಾನ್ಯ ಜನರನ್ನು ಹಾಗೂ ಸ್ಥಳಗಳನ್ನು ವೇದಿಕೆಯಲ್ಲಿ ಮಾತನಾಡುತ್ತ ನೆನೆದು ಅಚ್ಚರಿಯನ್ನುಂಟು ಮಾಡಿದರು. ತಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಹೆಸರು, ಸ್ಥಳಗಳನ್ನು ತಿಳಿಸುವ ಮೂಲಕ ತನ್ನ ಸ್ವಕ್ಷೇತ್ರವನ್ನು ಮರೆತ್ತಿಲ್ಲವೆಂಬುದನ್ನು ಸಾಬೀತುಪಡಿಸಿದರು.

ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಕಾಂಗ್ರೆಸ್ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ವೇದಿಕೆಯಲ್ಲಿ ಹಾಕಲಾಗಿದ್ದ ಆಸನಗಳು ಸಂಪೂರ್ಣ ಭರ್ತಿಯಾಗಿದ್ದರಿಂದ ಸುಡು ಬಿಸಿಲನ್ನು ಲೆಕ್ಕಿಸದೆ ವೇದಿಕೆಯ ಇಕ್ಕೆಲಗಳಲ್ಲಿ ನಿಂತುಕೊಂಡು ಹಾಗೂ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಸೈದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿರಂಜನರೆಡ್ಡಿ ಪಾಟೀಲ ಶೆಟ್ಟಿಹಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಮ್ಮ ಕೋಮಾರ್, ಪ್ರಧಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ದುಪ್ಪಲ್ಲಿ, ಯೂತ್ ಅಧ್ಯಕ್ಷ ವಿಜಯ ಕಂದಳ್ಳಿ, ಬನ್ನಪ್ಪ ಸಾಹುಕಾರ, ಕಿರಣ ಶಾ, ಹಂಪಣ್ಣಗೌಡ ಬೆಳಗುಂದಿ, ಪುಂಡಲಿಕ, ತಿಮ್ಮಾರೆಡ್ಡಿ, ಕೈಲಾಸ ಆಸ್ಪಲ್ಲಿ, ವೆಂಕಟೇಶ ಕೂಡ್ಲೂರು, ದೇವರಾಜ ಬಾಡಿಯಾಲ, ಮಂಜುನಾಥ ಮಲ್ಹಾರ, ಜುಬೇರ್ ಕಡೇಚೂರು, ಗಣೆಶ ಜೇಗರ್, ಬನ್ನಪ್ಪ ಹುಲಿಬೆಟ್ಟ ಸೇರಿದಂತೆ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.