ADVERTISEMENT

ಎಸ್‌ಡಿಪಿಐ ಕಾರ್ಯಕರ್ತರು ವಶಕ್ಕೆ, ಬಿಡುಗಡೆ: ಒಬ್ಬ ಬಂಧನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 15:57 IST
Last Updated 27 ಸೆಪ್ಟೆಂಬರ್ 2022, 15:57 IST
   

ಯಾದಗಿರಿ: ‘ಸಮಾಜದಲ್ಲಿ ಶಾಂತಿ ಕದಡುವ ಆರೋಪದ ಮೇಲೆಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ನ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಮೂವರನ್ನು ಬಿಡುಗಡೆ ಮಾಡಿದ್ದು, ಒಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒ‍ಪ್ಪಿಸಲಾಗಿದೆ‘ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾಹಿತಿ ನೀಡಿದ್ದಾರೆ.

‘ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಬಂದೇನವಾಜ ಗೋಗಿ, ಕಾರ್ಯದರ್ಶಿ ಮಹಮ್ಮದ್ ಹಸೀಮ್ ಪಟೇಲ್ ಗೋಗಿ,ಶೇಖ್ ಅನ್ವರ್ ಎನ್ನುವವರನ್ನು ವಶಕ್ಕೆ ವಿಚಾರಣೆ ಮಾಡಿ ಸಾಮಾಜಿಕ ಶಾಂತಿಗೆ ಭಂಗ ತರುವ ಸಾಧ್ಯತೆಗಳು ಕಂಡುಬಂದಿದ್ದರಿಂದ ಇವರ ವಿರುದ್ಧ ಕಲಂ 107 ಸಿಆರ್‌ಪಿಸಿ ರೀತಿ ಭದ್ರತಾ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ‌ ವಿಚಾರಣೆಯ ನಂತರ ಬಿಡುಗಡೆಗೊಳಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಮಹಮ್ಮದ್ ಮಹೆಬೂಬ್‌ ಜರಮನ್ ಎನ್ನುವವರನ್ನು ಬಂಧಿಸಿ 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಪಿಎಫ್ಐ ಸಂಘಟನೆಯ ಹೆಸರಿನಲ್ಲಿ ಚಟುವಟಿಕೆಗಳ ಮುಂದಾಳತ್ವದಿಂದ ಸಾಮಾಜಿಕ ಶಾಂತಿ ಕದಡುವ ಸಾಧ್ಯತೆಗಳು ಕಂಡುಬಂದಿದ್ದರಿಂದ ಈ ವ್ಯಕ್ತಿಯ ವಿರುದ್ಧ ಕಲಂ 107, 151 ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿ‌ ವಿಚಾರಣೆಯ ನಂತರ ತಹಶೀಲ್ದಾರ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಅಕ್ಟೋಬರ್‌6 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆರೋಪಿಯು ಸದ್ಯ ಸುರಪುರ ಉಪ-ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ADVERTISEMENT

'ಎಲ್ಲ ಕಡೆ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿರುವ ಕಾರಣ ಗೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್‌ಡಿಪಿಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ. ಒಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಜನರನ್ನು ಸೇರಿಸಿಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡುವ ಅವಕಾಶ ಇರುವ ಕಾರಣ ವಶಕ್ಕೆ ಪಡೆದುವಿಚಾರಣೆ ನಡೆಸಲಾಗುತ್ತಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಕಾರು ಅಡ್ಡಗಟ್ಟಿ ಪ್ರತಿಭಟನೆ:
ಎಸ್‌ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಕಾರ್ಯಕರ್ತರು ಶಹಾಪುರ ತಾಲ್ಲೂಕಿನ ಗೋಗಿ ಪೊಲೀಸ್‌ ಠಾಣೆಯ ಮುಂಭಾಗ ಕಾರು ಅಡ್ಡಗಟ್ಟಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.