ADVERTISEMENT

ವಡಗೇರಾ: ಭೀಮಾ ನದಿಯಲ್ಲಿ ಮುಳಗಿ 7 ವರ್ಷದ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 7:00 IST
Last Updated 26 ಫೆಬ್ರುವರಿ 2026, 7:00 IST
ವಡಗೇರಾ ಮರೆಮ್ಮ
ವಡಗೇರಾ ಮರೆಮ್ಮ   

ವಡಗೇರಾ: ತಾಲ್ಲೂಕಿನ ಬೆನಕಹಳ್ಳಿ ಗ್ರಾಮದ ಹತ್ತಿರ ಇರುವ ಭೀಮಾ ನದಿ ನೀರಿನಲ್ಲಿ ಬುಧವಾರ 7 ವರ್ಷದ ಬಾಲಕಿ ಮುಳಗಿ ಮೃತಪಟ್ಟಿದ್ದಾಳೆ.

ತಾಲ್ಲೂಕಿನ ಜೋಳದಡಗಿ ಗ್ರಾಮದ ನಿವಾಸಿ ಮೀನುಗಾರ ಕೊಂಡಪ್ಪ ಹಾಗೂ ತಾಯಮ್ಮ ದಂಪತಿಗಳ ಪುತ್ರಿ ಮರೆಮ್ಮ (7) ಘಟನೆಯಲ್ಲಿ ಮೃತಪಟ್ಟ ಬಾಲಕಿ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ಬೆನಕನಹಳ್ಳಿ ಗ್ರಾಮದ ಗ್ರಾಮದೇವತೆ ಮರೆಮ್ಮ ದೇವಿ ಜಾತ್ರೆ ಅಂಗವಾಗಿ ಜೋಳದಡಗಿ ಗ್ರಾಮದಿಂದ ಕುಟುಂಬ ಸಮೇತವಾಗಿ ಕೊಂಡಪ್ಪ ಜಾತ್ರೆಗೆ ಬಂದಿದ್ದರು. ಪಕ್ಕದಲ್ಲಿಯೆ ಇರುವ ಭೀಮಾ ನದಿಗೆ ಬಟ್ಟೆ ಒಗೆಯಲು ತಾಯಿ ತಾಯಮ್ಮಳ ಜತೆ ಮೃತ ಬಾಲಕಿಯೂ ನದಿಗೆ ಹೋಗಿದ್ದಳು.

ADVERTISEMENT

ತಾಯಿ ತಾಯಮ್ಮ ಬಟ್ಟೆ ಒಗೆಯುವ ಮುಂಚೆ ಮಗಳ ಕೈಗೆ ಮೊಬೈಲ್ ಕೊಟ್ಟು ಬಟ್ಟೆ ಒಗೆಯುವುದರಲ್ಲಿ ಮಗ್ನಳಾಗಿದ್ದಳು. ಈ ವೇಳೆ ಬಾಲಕಿ ಕಾಲು ಜಾರಿ ನದಿಯ ನೀರಿಗೆ ಬಿದ್ದಿದ್ದಾಳೆ. ಸ್ವಲ್ಪ ಸಮಯದ ನಂತರ ಮಗಳನ್ನು ಗಮನಿಸಿದ ತಾಯಿ ತಾಯಮ್ಮ ಮಗಳು ಸುಳಿವು ಇಲ್ಲದ್ದನ್ನು ಕಂಡು ಜೋರಾಗಿ ಅಳುವುದು ಹಾಗೂ ಚೀರುವುದನ್ನು ಮಾಡಿದ್ದಾಳೆ

ಈಕೆಯ ಅಳುವನ್ನು ಕಂಡು ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ ಸ್ಥಳಿಯರ ಸಹಾಯದಿಂದ ಮಗಳನ್ನು ರಕ್ಷಣೆ ಮಾಡಿ ಬೆಂಡೆಬೆಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.