
ಪ್ರಜಾವಾಣಿ ವಾರ್ತೆ
ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಗೋಗಿ (ಕೆ) ಗ್ರಾಮದ ಎಸ್‌ಬಿಸಿ ಮುಖ್ಯ ಕಾಲುವೆಯ ಭೋರುಕಾ ಪವರ್ ಪ್ಲಾಂಟ್ ಗೇಟ್ ಬಳಿ ನಾಲ್ಕು ವರ್ಷದ ಗಂಡು ಚಿರತೆಯ ಶವ ಗುರುವಾರ ಪತ್ತೆಯಾಗಿದೆ.
ವಿದ್ಯುತ್ ಉತ್ಪಾದನೆಯ ಭೋರುಕಾ ಕಂಪನಿ ಸಿಬ್ಬಂದಿ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಶವ ಹೊರತೆಗೆದರು.
‘ಚಿರತೆ ಬುಧವಾರ ರಾತ್ರಿ ರಭಸವಾಗಿ ಹರಿಯುತ್ತಿದ್ದ ಕಾಲುವೆಯ ನೀರಿನಲ್ಲಿ ಬಿದ್ದಿದೆ. ಮೇಲೆ ಬರಲು ಆಗದೆ ಸುಮಾರು 1 ಕಿ.ಮೀ. ದೂರ ಕೊಚ್ಚಿಕೊಂಡು ಹೋಗಿದ್ದು, ದೇಹದಲ್ಲಿ ಒಳಪೆಟ್ಟಾಗಿದೆ. ನೀರಿನ ರಭಸಕ್ಕೆ ಉಸಿರುಗಟ್ಟಿ ಅಸುನೀಗಿದೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿ ಡಾ.ಅಣ್ಣಾರಾವ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.