
ಪ್ರಜಾವಾಣಿ ವಾರ್ತೆ
ಶಹಾಪುರ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗುತ್ತಿರುವ ಹಲ್ಲೆ ಹಾಗೂ ದೌರ್ಜನ್ಯ ಹಾಗೂ ಹಿಂದೂ ಯುವಕ ದೀಪು ಚಂದ್ರದಾಸ್ ಎಂಬ ಹಿಂದೂ ಯುವಕನನ್ನು ಬಹಿರಂಗವಾಗಿ ಸುಟ್ಟು ಹಾಕಿರುವುದನ್ನು ಖಂಡಿಸಿ ಗುರುವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಶ್ರಯದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಕರಣ ಸುಬೇದಾರ, ಚಂದ್ರಕಾಂತ ಕಂಬಾರ, ವಿನೋದ ಸಾವೂರ, ಶ್ರೀಶೈಲ ಹೊಸಮನಿ, ಚಂದ್ರಶೇಖರ ಯಾಳಗಿ, ಶಿವಕುಮಾರ ತಳವಾರ, ಮಹೇಶ ದೊರೆ, ಸಚಿನ ಹಳಿಸಗರ, ಮಂಜುನಾಥ, ಬಸವರಾಜ , ಅಭಿಷೇಕ, ಭೀಮಣ್ಣ ದೇಸಾಯಿ, ಬಸವರಾಜ ಭಾಗವಹಿಸಿದ್ದರು.