ADVERTISEMENT

ಶಹಾಪುರ | 'ಕ್ಷಯರೋಗ ಆರಂಭದ ಹಂತದಲ್ಲಿ ಪತ್ತೆ ಹಚ್ಚಿ'

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 8:01 IST
Last Updated 9 ಫೆಬ್ರುವರಿ 2026, 8:01 IST
ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾ ಅಧಿಕಾರಿ ಮಲ್ಲೇಶ ಕುರಕುಂದಿ ಮಾತನಾಡಿದರು
ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾ ಅಧಿಕಾರಿ ಮಲ್ಲೇಶ ಕುರಕುಂದಿ ಮಾತನಾಡಿದರು   

ಶಹಾಪುರ: ‘ಕ್ಷಯರೋಗ ಗುಣಪಡಿಸಿಬಹುದಾದ ರೋಗವಾಗಿದೆ. ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸರಿಯಾದ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯ’ ಎಂದು ವನದುರ್ಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾ ಅಧಿಕಾರಿ ಮಲ್ಲೇಶ ಕುರಕುಂದಿ ತಿಳಿಸಿದರು.

ತಾಲ್ಲೂಕಿನ ವನದುರ್ಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ಷಯರೋಗದ ಪ್ರಮುಖ ಲಕ್ಷಣಗಳೆಂದರೆ, 2 ವಾರಕ್ಕಿಂತ ಹೆಚ್ಚು ನಿರಂತರ ಕೆಮ್ಮು, ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು, ರಾತ್ರಿ ಹೆಚ್ಚು ಬೆವರುವುದು, ತೂಕ ಕಡಿಮೆಯಾಗುವುದು, ನಿರಂತರ ಜ್ವರ, ಉಸಿರಾಟದ ಸಮಸ್ಯೆ, ಎದೆನೋವು ಕಾಣಿಸಿಕೊಳ್ಳುವುದಾಗಿದೆ. ಕ್ಷಯ ರೋಗವು ಸೋಂಕಿನ ವ್ಯಕ್ತಿ ಕೆಮ್ಮಿದಾಗ ಸೂಕ್ಷ್ಮ ವೀವಾಣುಗಳ ಮೂಲಕ ಗಾಳಿಯಲ್ಲಿ ಹರಡುತ್ತದೆ’ ಎಂದರು.

‘ಕ್ಷಯರೋಗಕ್ಕೆ ಸರ್ಕಾರದಿಂದ ಉಚಿತ ಔಷದೋಪಚಾರ, ಮನೆ ಬಾಗಿಲಿಗೆ ಔಷಧಿ ವಿತರಣೆ ನೀಡಲಾಗುತ್ತದೆ’ ಎಂದರು.

ADVERTISEMENT

ಆರೋಗ್ಯ ಕೇಂದ್ರ ಸಂರಕ್ಷಣಾಧಿಕಾರಿ ವಿಜಯಲಕ್ಷ್ಮಿ, ನೇತ್ರಾವತಿ, ಬಸವರಾಜ ಕಕ್ಕೇರಿ, ಮಲ್ಲಿಕಾರ್ಜುನ ಕುಂಬಾರ, ತಾಯಮ್ಮ, ಮಂಜುಳಾ, ಸುಮಾ, ಶರಬಮ್ಮ, ವೇದಾವತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.