ADVERTISEMENT

ಶಂಬನಗೌಡರ ಸಮಾಜಮುಖಿ ಕಾರ್ಯ ಸ್ಮರಣೀಯ

ನುಡಿನಮನ ಕಾರ್ಯಕ್ರಮದಲ್ಲಿ ಮುದಗಲ್ ಮಹಾಂತ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 2:53 IST
Last Updated 3 ಜನವರಿ 2022, 2:53 IST
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಶಾಸಕ ರಾಜುಗೌಡ ಅವರ ತಂದೆ ಶಂಭನಗೌಡ ಪಾಟೀಲ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮುದಗಲ್ ಮಹಾಂತ ಸ್ವಾಮಿಜಿ ಮಾತನಾಡಿದರು. ವಿವಿಧ ಮಠಾಧೀಶರು ಇದ್ದರು
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಶಾಸಕ ರಾಜುಗೌಡ ಅವರ ತಂದೆ ಶಂಭನಗೌಡ ಪಾಟೀಲ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮುದಗಲ್ ಮಹಾಂತ ಸ್ವಾಮಿಜಿ ಮಾತನಾಡಿದರು. ವಿವಿಧ ಮಠಾಧೀಶರು ಇದ್ದರು   

ಕೊಡೇಕಲ್ಲ (ಹುಣಸಗಿ): ಸ್ವಂತಕ್ಕಿಂತ ಸಮಾಜದ ಹಿತಕ್ಕಾಗಿ ಬದುಕುವುದೇ ಮೇಲು. ಈ ನಿಟ್ಟಿನಲ್ಲಿ ಶಂಬನಗೌಡರು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಮುದಗಲ್ ಮಹಾಂತ ಸ್ವಾಮೀಜಿ ಹೇಳಿದರು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಶಾಸಕ ರಾಜೂಗೌಡರ ತಂದೆ ಶಂಭನಗೌಡ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜಮುಖಿ ಕಾರ್ಯಗಳನ್ನು ಪ್ರತಿಯೊಬ್ಬರ ಸಾವಿನ ನಂತರವು ಜನತೆ ಶಾಶ್ವತವಾಗಿ ಸ್ಮರಿಸುತ್ತಾರೆ. ಅದರದಲ್ಲಿಯೂ ಕೊಡೇಕಲ್ಲ ಭಾಗದಲ್ಲಿ ಶಂಬನಗೌಡರು ನೇರ ನುಡಿಗಳೊಂದಿಗೆ ಜನರಿಗೆ ಹತ್ತಿರವಾಗಿದ್ದರು ಎಂದರು.

ADVERTISEMENT

ದೇವಪುರ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ, ಶಂಬನಗೌಡ ಪಾಟೀಲ ಅವರು ಶಾಸಕ ರಾಜುಗೌಡರ ಅದಮ್ಯ ಶಕ್ತಿಯಾಗಿದ್ದರು. ಆರಂಭದ ರಾಜಕೀಯ ದಿನಗಳಲ್ಲಿ ಮುಂಚೂಣಿಯಲ್ಲಿ ನಿಂತು ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದರು.

ಈ ಸಂದರ್ಭದಲ್ಲಿ ಕೊಡೇಕಲ್ಲ ಬಸವ ಪೀಠಾಧಿಪತಿ ವೃಷಬೇಂದ್ರ ಅಪ್ಪ, ದುರದುಂಡೇಶ್ವರ ವಿರಕ್ತಮಠ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ, ಜಾಲಹಳ್ಳಿಯ ಜಯಶಾಂತಲಿಂಗೇಶ್ವರ ಶಿವಾಚಾರ್ಯರು, ಅಡವಿಲೀಂಗ ಮಹಾರಾಜರು, ಮುದನೂರು ಕಂಠಿಮಠದ ಸಿದ್ಧಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಕೆಂಭಾವಿಯ ಚನ್ನಬಸವ ಶಿವಾಚಾರ್ಯರು, ಗುಳಬಾಳದ ಮರಿಹುಚ್ಚೇಶ್ವರ ಸ್ವಾಮೀಜಿ, ಅಗತೀರ್ಥದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ, ಶಾಮಸುಂದರ ಜೋಷಿ, ವಜ್ಜಲ್ ತಾಂಡಾದ ವಿಠ್ಠಲ ಮಾಹಾರಾಜರು, ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ನಗನೂರು ಶರಣರು, ಕೂಡಲಗಿಯ ಬಾಬಾ ಮಹಾರಾಜರು, ಕರಡಕಲ್ಲ ಶಾಂತರುದ್ರಮುನಿ ಸ್ವಾಮೀಜಿ, ದಾವಲಮಲೀಕ್ ಮುತ್ಯಾ ಇದ್ದರು.‌

ಅಂತಿಮ ವಿದಾಯ: ಶಂಭನಗೌಡ ಪಾಟೀಲ ಅವರ ಅಂತಿಮ ಯಾತ್ರೆಯು ಅಪಾರ ಜನಸ್ತೋಮದ ಮಧ್ಯೆ ಭಾನುವಾರ ಮಧ್ಯಾಹ್ನ ನಡೆಯಿತು.

ಯಾದಗಿರಿ ಜಿಲ್ಲೆ ಸೇರಿದಂತೆ ನೆರೆಯ ವಿಜಯಪುರ, ರಾಯಚೂರು, ಕಲಬುರ್ಗಿ ಜಿಲ್ಲೆಯ ಮಠಾಧೀಶರು, ಶಾಸಕರು, ರಾಜಕೀಯ ದುರಿಣರು, ಅಧಿಕಾರಿಗಳು, ಹಾಗೂ ಬಿಜೆಪಿ ಕಾರ್ಯಕರ್ತರು ಆಗಮಿಸಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಪೂರ್ವ ನಿಗದಿಯಂತೆ ಅವರ ಸ್ವಂತ ತೋಟದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು.

ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ದತ್ತಾತ್ರೇಯ ಪಾಟೀಲ ರೇವೂರು, ವೆಂಕಟರೆಡ್ಡಿ ಮುದ್ನಾಳ, ಬಳ್ಳಾರಿ ಶಾಸಕ ಎ.ನಾಗೇಂದ್ರ, ಜಿಲ್ಲಾಧಿಕಾರಿ ರಾಗಪ್ರಿಯ.ಆರ್, ಡಾ.ಎಸ್.ಪಿ.ದಯಾನಂದ, ರಾಜಾ ಜಿತೇಂದ್ರನಾಯಕ ಜಹಾಗೀರದಾರ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಮಾನಪ್ಪ ವಜ್ಜಲ್, ಅಮರನಾಥ ಪಾಟೀಲ್, ರಾಜಶೇಖರಗೌಡ ಪಾಟೀಲ ವಜ್ಜಲ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ರಾಜಾ ಹನುಮಪ್ಪನಾಯಕ ತಾತಾ, ಸುರೇಶ ಸಜ್ಜನ್, ಕಿಶೋರಚಂದ್ ಜೈನ್, ಶಂಕರನಾಯಕ, ಎಚ್.ಸಿ.ಪಾಟೀಲ ಪಾಲ್ಗೊಂಡಿದ್ದರು. ಡಿವೈಎಸ್ಪಿ ಡಾ.ದೇವರಾಜ, ಸಿಪಿಐ ದೌಲತ್.ಎನ್.ಕೆ, ಪಿಎಸ್ಐ ಬಾಷುಮಿಯ, ಚಿದಾನಂದ, ಕೃಷ್ಣಮೂರ್ತಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.