ADVERTISEMENT

ಯಾದಗಿರಿ | ಉರ್ದು ಶಾಲೆಯಲ್ಲಿ ಶೂ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 6:01 IST
Last Updated 3 ಡಿಸೆಂಬರ್ 2022, 6:01 IST
ವಡಗೇರಾ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದ್‌ ಖುರೇಸಿ ಶೂ ಹಾಗೂ ಕಾಲು ಚೀಲಗಳನ್ನು ವಿತರಣೆ ಮಾಡಿ ಮಾತನಾಡಿದರು
ವಡಗೇರಾ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದ್‌ ಖುರೇಸಿ ಶೂ ಹಾಗೂ ಕಾಲು ಚೀಲಗಳನ್ನು ವಿತರಣೆ ಮಾಡಿ ಮಾತನಾಡಿದರು   

ಯಾದಗಿರಿ: ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದರೆ ಸಾಲದು. ಕಡ್ಡಾಯವಾಗಿ ವಾರಕೊಮ್ಮೆ ಶಾಲೆಗೆ ಬಂದು ತಮ್ಮ ಮಕ್ಕಳ ಕಲಿಕೆಯ ಬಗ್ಗೆ ಶಿಕ್ಷಕರಲ್ಲಿ ಚರ್ಚಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದ ಖುರೇಸಿ ಹೇಳಿದರು.

ವಡಗೇರಾ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ಮತ್ತು ಕಾಲು ಚೀಲಗಳನ್ನು ವಿತರಿಸಿ ಮಾತನಾಡಿದರು.

ಈಗಾಗಲೇ ಶಾಸಕರನ್ನು ಭೇಟಿಯಾಗಿ ಉರ್ದು ಪ್ರೌಢಶಾಲೆ ಆರಂಭಿಸಲು ಮನವಿ ಸಲ್ಲಿಸಲಾಗಿದೆ. ಅವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಟ್ಟಣದಲ್ಲಿ ಉರ್ದು ಪ್ರೌಢಶಾಲೆ ಆರಂಭವಾಗುವ ಭರವಸೆ ಇದೆ. ಅದಕ್ಕಾಗಿ ಪಾಲಕರು ತಮ್ಮ ಮಕ್ಕಳನ್ನು ಅರ್ಧಕ್ಕೆ ಶಾಲೆ ಬಿಡಿಸಬಾರದು ದಿನಾಲೂ ಶಾಲೆಗೆ ಕಳುಹಿಸಬೇಕು ಎಂದು ತಿಳಿಸಿದರು.

ADVERTISEMENT

ಪ್ರಾಧ್ಯಾಪಕ ಡಾ. ಮರಿಯಪ್ಪ ನಾಟೇಕಾರ ಮಾತನಾಡಿದರು.

ಮುಖ್ಯಶಿಕ್ಷಕ ಬಾಕರ್ ಅಹ್ಮರ್, ಶಿಕ್ಷಕರಾದ ಸೈಯ್ಯದ ತನ್ವೀರ, ಮೀನಾಕ್ಷಿ, ರಿಜ್ವಾನಾ, ಕೌಸರ್, ಗಜಾಲ್‌ಪರ್ವಿನ್, ತಹಸೀನ್‌ಬಾನು, ರಾಬಿಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.