ADVERTISEMENT

ಹಾಲುಮತ ಸಮಾಜಕ್ಕೆ ತುಂಬಲಾರದ ನಷ್ಟ: ಸಿದ್ದು ಪೂಜಾರಿ

ಸೈದಾಪುರ: ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮನಂದಪುರಿ ಸ್ವಾಮಿಜಿಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:10 IST
Last Updated 16 ಜನವರಿ 2026, 7:10 IST
ಸೈದಾಪುರ ಪಟ್ಟಣದ ಕನಕ ವೃತ್ತದಲ್ಲಿ ಹಾಲುಮತ ಸಮಾಜದಿಂದ ಕಾಗಿನೆಲೆ ಗುರುಪೀಠದ ಸಿದ್ಧರಾಮನಂದ ಪುರಿ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು 
ಸೈದಾಪುರ ಪಟ್ಟಣದ ಕನಕ ವೃತ್ತದಲ್ಲಿ ಹಾಲುಮತ ಸಮಾಜದಿಂದ ಕಾಗಿನೆಲೆ ಗುರುಪೀಠದ ಸಿದ್ಧರಾಮನಂದ ಪುರಿ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು    

ಸೈದಾಪುರ: ‘ಹಾಲುಮತ ಸಮಾಜದ ಸಂಸ್ಕೃತಿ ಪಸರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಕಾಗಿನೆಲೆ ಗುರುಪೀಠದ ಸಿದ್ಧರಾಮನಂದ ಪುರಿ ಸ್ವಾಮೀಜಿ ಅವರನ್ನು ಕಳೆದುಕೊಂಡಿರುವುದು ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಹಾಲುಮತ ಸಮಾಜದ ಯುವ ಮುಖಂಡ ಸಿದ್ದು ಪೂಜಾರಿ ಅಭಿಪ್ರಾಯಪಟ್ಟರು.

ಪಟ್ಟಣದ ಕನಕ ವೃತ್ತದಲ್ಲಿ ಹಾಲುಮತ ಸಮಾಜದಿಂದ ಏರ್ಪಡಿಸಿದ್ದ ಕಾಗಿನಲೆ ಗುರುಪೀಠದ ಸಿದ್ಧರಾಮನಂದ ಪುರಿ ಸ್ವಾಮೀಜಿಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಾಪ ವ್ಯಕ್ತಪಡಿಸಿದರು.

‘ಸ್ವಾಮಿಜೀಯವರು ಹಾಲುಮತ ಸಮಾಜದ ಜತೆಗೆ ಇತರೆ ಹಿಂದುಳಿದ ಸಮಾಜಗಳ ಜಾಗೃತಿ ಮತ್ತು ಸಂಸ್ಕೃತಿ ಸಂರಕ್ಷಣೆಗಾಗಿ ಮಾಡಿದ ಕಾರ್ಯಗಳು ಅವಿಸ್ಮರಣೀಯವಾಗಿವೆ. ಸ್ವಾಮೀಜಿಯವರು ಕಂಡ ಸಂಸ್ಕಾರಭರಿತ ಸಮಾಜ ನಿರ್ಮಾಣದ ಕನಸನ್ನು ನಾವೆಲ್ಲರೂ ನೆರವೇರಿಸೋಣ’ ಎಂದರು.

ADVERTISEMENT

ಈ ವೇಳೆ ಚಂದ್ರಶೇಖರ್ ವಾರದ, ಕೆ.ವಿಶ್ವನಾಥ ನೀಲಹಳ್ಳಿ, ಭೀಮಶಪ್ಪ ಜೆಗರ್, ಹಾಲುಮತ ಸಮಾಜದ ವಲಯ ಅಧ್ಯಕ್ಷ ರವಿಕುಮಾರ, ಪರಮೇಶ ವಾರದ್, ಗ್ರಾ.ಪಂ.ಮಾಜಿ ಅಧ್ಯಕ್ಷ ಮಾಳಪ್ಪ ಅರಿಕೇರಿ, ಮಹೇಶ ಜೇಗರ್, ಸಾಬಣ್ಣ ಹಿಂದುಪೂರ, ಲಿಂಗಾರೆಡ್ಡಿ ಗೊಬ್ಬೂರು, ಯಲ್ಲಪ್ಪ ಮುನಗಾಲ್, ವಿಜಯ ಕಂದಳ್ಳಿ, ಸಿದ್ರಾಮಪ್ಪ ಜೇಗರ್, ಪ್ರಕಾಶ ಜೇಗರ್, ಬಸವಲಿಂಗಪ್ಪ ಗೌಡಿಗೇರಾ, ಸಂಗಪ್ಪ, ಅರುಣ್ ಜೇಗರ್, ಸಿದ್ದು ಜೇಗರ್ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.