ADVERTISEMENT

ಪ್ರವೇಶ ಪತ್ರ ಪಡೆದು ಬರುವಾಗ ಹೃದಯಾಘಾತದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 17:06 IST
Last Updated 14 ಜುಲೈ 2021, 17:06 IST
ನಿಶಿತಾ ಫಾತಿಮಾ
ನಿಶಿತಾ ಫಾತಿಮಾ   

ಗುರುಮಠಕಲ್ (ಯಾದಗಿರಿ): ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರವೇಶ ಪತ್ರ ಪಡೆದು ಹಿಂದಿರುಗುವಾಗ ತೀವ್ರ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ಬುಧವಾರ ಜರುಗಿದೆ.

ತಾಲ್ಲೂಕಿನ ಪುಟಪಾಕ ಗ್ರಾಮದ ವಿದ್ಯಾರ್ಥಿ ನಿಶಿತಾ ಫಾತಿಮಾ ಎಂ.ಡಿ.ಮೌಲಾನ (16) ಮೃತಪಟ್ಟ ವಿದ್ಯಾರ್ಥಿನಿ.

ಪಟ್ಟಣದ ಸರ್ಕಾರಿ ಬಾಲಕಿಯರ ಉರ್ದು ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ನಿಶಿತಾ ಫಾತಿಮಾ ಅಭ್ಯಾಸ ಮಾಡುತ್ತಿದ್ದಳು. ಜುಲೈ 19, 22ರಂದು ಜರುಗಲಿರುವ ಪರೀಕ್ಷೆಗಾಗಿ ಶಾಲೆಯಲ್ಲಿ ಬುಧವಾರ ಪ್ರವೇಶ ಪತ್ರ ಪಡೆದುಕೊಂಡು ಗ್ರಾಮಕ್ಕೆ ಹಿಂದಿರುಗಲು ಗುರುಮಠಕಲ್‌ ಬಸ್‌ ನಿಲ್ದಾಣದಲ್ಲಿ ಕಾಯುತ್ತಾ ಕುಳಿತ್ತಿದ್ದ ಸಮಯದಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾಳೆ.

ADVERTISEMENT

ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.