ADVERTISEMENT

ಸುರಪುರ: ಕಸಾಪ ವರ್ಷದ ವ್ಯಕ್ತಿಯಾಗಿ ಪಾಣಿಭಾತೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 7:16 IST
Last Updated 1 ನವೆಂಬರ್ 2025, 7:16 IST
ಜನಾರ್ಧನ ಪಾಣಿಬಾತೆ
ಜನಾರ್ಧನ ಪಾಣಿಬಾತೆ   

ಸುರಪುರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕೊಡ ಮಾಡುವ ವರ್ಷದ ವ್ಯಕ್ತಿ ಪ್ರಶಸ್ತಿಗೆ ರಂಗಂಪೇಟೆಯ ಸಾಹಿತಿ, ವಿದ್ವಾಂಸ ಜನಾರ್ಧನ ಪಾಣಿಬಾತೆ ಆಯ್ಕೆಯಾಗಿದ್ದಾರೆ.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಯ್ಕೆ ಸಮಿತಿ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಜನಾರ್ಧನ ಪಾಣಿಬಾತೆ ಆಯ್ಕೆಯನ್ನು ಪ್ರಕಟಿಸಲಾಯಿತು.

ತಾಲ್ಲೂಕು ಕಸಾಪ ಗೌರವಾಧ್ಯಕ್ಷ ರಾಜಾ ಮುಕುಂದನಾಯಕ ಮಾತನಾಡಿ, ‘ಹಿರಿಯ ಸಾಹಿತಿ ಜನಾರ್ಧನ ಪಾಣಿಭಾತೆ ಅವರು ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ್ದಾರೆ’ ಎಂದರು.

ADVERTISEMENT

ಕಸಾಪ ತಾಲ್ಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿ, ‘ಎಲ್ಲರ ಅಭಿಪ್ರಾಯದ ಮೇರೆಗೆ ಪಾಣಿಭಾತೆ ಅವರನ್ನು ಆಯ್ಕೆ ಮಾಡಲಾಗಿದೆ. ಸೂಕ್ತ ದಿನ ನಿಗದಿ ಪಡಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು’ ಎಂದರು.

ಶಾಂತಪ್ಪ ಬೂದಿಹಾಳ, ನಬಿಲಾಲ್ ಮಕಾನದಾರ್, ಪ್ರಕಾಶಚಂದ ಜೈನ್, ಪ್ರಕಾಶ ಸಜ್ಜನ್, ಮಲ್ಲಿಕಾರ್ಜುನ ಸತ್ಯಂಪೇಟೆ, ಯಲ್ಲಪ್ಪ ಹುಲಕಲ್, ಸೋಮರೆಡ್ಡಿ ಮಂಗಿಹಾಳ, ಚನ್ನಮಲ್ಲಿಕಾರ್ಜುನ ಗುಂಡಾನೋರ, ಜಾವೇದ್ ಹುಸೇನ್, ಬಸವರಾಜ ಅಮ್ಮಾಪುರ, ಪ್ರಕಾಶ ಅಲಬನೂರ, ರಾಘವೇಂದ್ರ ಭಕ್ರಿ, ಶರಣಬಸವ ಹೂಗಾರ, ಸೋಮಶೇಖರ ಚಿಲ್ಲಾಳ, ಜ್ಞಾನೇಶ್ವರ ಪಾಣಿಬಾತೆ ಭಾಗವಹಿಸಿದ್ದರು.

ಕಸಾಪ ಗೌರವ ಕಾರ್ಯದರ್ಶಿ ಎಚ್.ವೈ.ರಾಠೋಡ್ ನಿರೂಪಿಸಿದರು. ಶಿಕ್ಷಕ ಸಾಹೇಬರೆಡ್ಡಿ ಇಟಗಿ ಸ್ವಾಗತಿಸಿದರು. ಉಪನ್ಯಾಸಕ ದೇವು ಹೆಬ್ಬಾಳ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.