ಹುಣಸಗಿ: ಯಾರು ತಮ್ಮ ಜೀವನದಲ್ಲಿ ಸಮಯ ಪಾಲನೆಗೆ ಹೆಚ್ಚು ಮಹತ್ವ ಕೊಡುತ್ತಾರೆ. ಅವರಿಗೆ ಸಮಯವೇ ಮುಂದೆ ಒಳ್ಳೆಯ ಅವಕಾಶವನ್ನು ತಂದುಕೊಡುತ್ತದೆ. ಆದರೆ ಆ ಸಮಯಕ್ಕಾಗಿ ಕಾಯುವಿಕೆ ಮುಖ್ಯ ಎಂದು ಪದ್ಮಶ್ರೀ ಮಾತಾ ಮಂಜಮ್ಮ ಜೋಗುತಿ ಹೇಳಿದರು.
ಹುಣಸಗಿ ಪಟ್ಟಣದಲ್ಲಿ ಭಗೀರಥ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಚಿಣ್ಣರ ಹಬ್ಬ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳನ್ನು ಮೊಬೈಲ್ ವ್ಯಾಮೋಹದಿಂದ ದೂರ ಇಟ್ಟು ಬೆಳೆಸುವುದು ಮುಖ್ಯವಾಗಿದೆ. ಪಾಲಕರಾದರೂ ತಾವು ಮಕ್ಕಳ ಜೊತೆ ಇರುವಾಗ ಮೊಬೈಲ್ ಬಳಕೆಯಿಂದ ದೂರವಿರಬೇಕು. ಅವರೊಂದಿಗೆ ಬೆರೆತು ಪಾಠ ಮತ್ತು ಆಟದಲ್ಲಿಯೂ ಪಾಲ್ಗೊಂಡು ಮಕ್ಕಳ ಮನಸ್ಸಿಗೆ ಹತ್ತಿರವಾಗುವದು ಪಾಲಕರ ಕರ್ತವ್ಯ ಎಂದು ಹೇಳಿದರು.
ಹೊನವಾಡದ ಚಿಂತಕ ಬಾಬುರಾವ್ ಮಹಾರಾಜ ಮಾತನಾಡಿ, ಮಕ್ಕಳನ್ನು ಅಂಕಗಳಿಸುವ ಕಂಪನಿಯನ್ನಾಗಿ ತಯಾರು ಮಾಡದೇ ಸಂಸ್ಕಾರವಂತ ಹಾಗೂ ಸುಶೀಕ್ಷಿತ ಮಕ್ಕಳನ್ನಾಗಿ ರೂಪಿಸುವಲ್ಲಿ ಶಿಕ್ಷಕ ಪಾಲಕ ಹಾಗೂ ಸಂಸ್ಥೆಯ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಮಾತನಾಡಿದರು.
ಮೇಲಪ್ಪ ಗುಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದು ಮುದಗಲ್, ಸಿದ್ದನಗೌಡ ಕರಿಬಾವಿ, ಪ್ರದೀಪ್ ಧರೋಜಿ, ವೈದ್ಯ ಮಂಜುನಾಥ ಮಲಗಲದಿನ್ನಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹಾಲಿಂಗರಾಜು ಹೊಕ್ರಾಣಿ, ಬಿಆರ್.ಪಿ ಬಂಗಾರೆಪ್ಪ, ಸದಾಶಿವ ಸಾಲಿ, ವಿಜಯಕುಮಾರ ದೇಸಾಯಿ, ಭೀಮಶೇನರಾವ್ ಕುಲಕರ್ಣಿ, ರಾಘವೇಂದ್ರ ಹೆಬ್ಬಾಳ, ಶಿಕ್ಷಕರಾದ ಅನುರಾಧಾ, ಶ್ರೀದೇವಿ ಫಾತಿಮಾ, ಭಾಗ್ಯಶ್ರೀ, ರಾಣಿ, ನಾಗಮ್ಮ ಹಿರೇಮಠ ಸೇರಿದಂತೆ ಇತರರು ಹಾಜರಿದ್ದರು.
ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಶಿಕ್ಷಕ ಬಾಬು ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.