
ಪ್ರಜಾವಾಣಿ ವಾರ್ತೆ
ಕೆಂಭಾವಿ ಸಮೀಪದ ಮಾಳಳ್ಳಿ ಗ್ರಾಮದಲ್ಲಿ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿರುವುದು
ಕೆಂಭಾವಿ: ಸಮೀಪದ ಮಾಳಳ್ಳಿ ಗ್ರಾಮದಲ್ಲಿ 11 ಎಕರೆಯಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ ಬುಧವಾರ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟುಹೋಗಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಮಾಳಹಳ್ಳಿ ಗ್ರಾಮದ ವೆಂಕನಗೌಡ ಎಸ್. ಪಾಟೀಲ ಅವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಕಟಾವಿನ ಹಂತಕ್ಕೆ ಬಂದಿದ್ದ 11 ಎಕರೆ ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿದೆ.
‘ಕಳೆದ ಬಾರಿ ಇದೇ ಜಮೀನಿನಲ್ಲಿ 400 ಟನ್ ಕಬ್ಬು ಬೆಳೆದ್ದಿದೆ. ಈ ಬಾರಿ ಅದಕ್ಕಿಂತ ಅಧಿಕ ಇಳುವರಿ ಬರುವ ನಿರೀಕ್ಷೆಯಿತ್ತು. ಇದಿಗ ಬೆಂಕಿ ತಗುಲಿ ಬೆಳೆ ಸಂಪೂರ್ಣ ಸುಟ್ಟು ಹೋಗಿದೆ’ ಎಂದು ವೆಂಕನಗೌಡ ತಿಳಿಸಿದರು.
ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.