ಸುರಪುರ: ನಗರದ ಬಸ್‍ನಿಲ್ದಾಣದ ಪ್ರವೇಶ ದ್ವಾರದಲ್ಲಿ ಇರುವ ದೊಡ್ಡ ಮ್ಯಾನ್‍ಹೋಲ್‍ನ ಕಬ್ಬಿಣದ ಸರಳುಗಳು ಕಿತ್ತು ಹೋಗಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.
ಮ್ಯಾನ್‌ಹೋಲ್ ಕೆಳಗೆ 10 ಅಡಿಗಳಷ್ಟು ಆಳವಿದೆ. ಪ್ರಯಾಣಿಕರು, ದನ, ಕರು ಸಲೀಸಾಗಿ ಕೆಳಗೆ ಬೀಳುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಪ್ರಯಾಣಿಕರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ತಿರುಗಾಡುತ್ತಾರೆ. ದ್ವಿಚಕ್ರ ವಾಹನಗಳೂ ಓಡಾಡುತ್ತವೆ. ಹೀಗಾಗಿ ಅಪಾಯ ಸಂಭವಿಸುವ ಮುನ್ನ ಮ್ಯಾನ್‍ಹೋಲ್ ಮುಚ್ಚಳ ದುರಸ್ತಿ ಮಾಡಬೇಕು.
ರಾಘವೇಂದ್ರ ಭಕ್ರಿ, ವಿಶ್ವನಾಥ ಹೊಸಮನಿ, ಸ್ಥಳೀಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.