ADVERTISEMENT

ಹಸನಾಪುರ: ಅಂಬಿಗರ ಚೌಡಯ್ಯ ವೃತ್ತ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 8:00 IST
Last Updated 9 ಫೆಬ್ರುವರಿ 2026, 8:00 IST
ಸುರಪುರ ಸಮೀಪದ ಹಸನಾಪುರದಲ್ಲಿ ಅಂಬಿಗರ ಚೌಡಯ್ಯ ವೃತ್ತವನ್ನು ಗಣ್ಯರು ಉದ್ಘಾಟಿಸಿದರು
ಸುರಪುರ ಸಮೀಪದ ಹಸನಾಪುರದಲ್ಲಿ ಅಂಬಿಗರ ಚೌಡಯ್ಯ ವೃತ್ತವನ್ನು ಗಣ್ಯರು ಉದ್ಘಾಟಿಸಿದರು   

ಸುರಪುರ: ‘ಕೋಲಿ ಕಬ್ಬಲಿಗ ಮತ್ತು ಗಂಗಾಮತ ಸಮಾಜ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಒಳ್ಳೆ ಅಧಿಕಾರಿಗಳನ್ನಾಗಿ ಮಾಡಬೇಕು’ ಎಂದು ವಕೀಲ ವಿಶ್ವಾಮಿತ್ರ ಕಟ್ಟಿಮನಿ ಕರೆ ನೀಡಿದರು.

ನಗರಸಭೆ ವ್ಯಾಪ್ತಿಯ ಹಸನಾಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ವೃತ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಅಧ್ಯಕ್ಷ ದೇವಿಂದ್ರಪ್ಪಗೌಡ ಮಾಲಿಪಾಟೀಲ ಮಾತನಾಡಿ, ‘ಸಮಾಜ ಬಾಂಧವರು ಕಾಯಕ ಜೀವಿಗಳು. ಬಡತನವಿದ್ದರು ಹೃದಯ ಶ್ರೀಮಂತಿಕೆ ಹೊಂದಿದ್ದಾರೆ. ಒಕ್ಕಟ್ಟಿನಿಂದ ಹಕ್ಕು ಪಡೆಯಲು ಸಾಧ್ಯ. ಆದ್ದರಿಂದ ಸಮಾಜ ಬಾಂಧವರು ಸಂಘಟಿತರಾಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಸಮಾಜದ ಮುಖಂಡ ಮಾನಪ್ಪ ಸೂಗೂರು ಮಾತನಾಡಿ ‘ಚೌಡಯ್ಯನವರು ನೇರ ನಿಷ್ಠುರ ಶರಣರಾಗಿದ್ದರು. ಶರಣ ಸಂಕುಲದಲ್ಲಿಯೇ ವಿಭಿನ್ನ ವ್ಯಕ್ತಿತ್ವ ಹೊಂದಿದ್ದ ಶ್ರೇಷ್ಠ ವಚನಕಾರರಾಗಿದ್ದರು. ಭವ ಸಾಗರವೆಂಬ ಸಂಸಾರದ ದೋಣಿಯನ್ನು ಅರಿವಿನ ಹುಟ್ಟು ಹಾಕುವದರೊಂದಿಗೆ ಹೇಗೆ ದಡ ಸೇರಿಸಬೇಕು ಎಂಬುದನ್ನು ತಮ್ಮ ವಚನಗಳ ಮೂಲಕ ಕಟ್ಟಿ ಕೊಟ್ಟಿದ್ದಾರೆ’ ಎಂದರು.

‘ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಮೂಢ ನಂಬಿಕೆ ಕಂದಾಚಾರಗಳನ್ನು ಕಿತ್ತೊಗೆಯಲು ಅವಿರತವಾಗಿ ಶ್ರಮಿಸಿದರು. ನಿಷ್ಠುರ ವಚನಗಳ ಮೂಲಕ ನಿಜ ಶರಣ ಎಂಬ ಹೆಸರು ಪಡೆದಕೊಂಡರು’ ಎಂದು ಹೇಳಿದರು.

ಮುಖಂಡರಾದ ಮರೆಪ್ಪ ದಾಯಿ, ಭೀಮಣ್ಣ ಮೇಸ್ತ್ರಿ, ಮಲ್ಲು ತಳವಾರ, ಭಾಗೇಶ ಏವೂರ, ಮಂಜು ಮುದ್ನೂರ, ವೆಂಕಟೇಶ ಚಟ್ನಳ್ಳಿ, ಯಮನಪ್ಪ ಗಂಗನಾಳ, ಬಸಣ್ಣ ಗೂಡೂರು, ಶರಣಗೌಡ ಪಾಟೀಲ, ಭೀಮಾಶಂಕರ ಬಿಲ್ಲವ, ಶಿವಪ್ಪ ನಂಬಾ, ಲಕ್ಷ್ಮೀ ಬಿಲ್ಲವ, ಮಲ್ಕಪ್ಪಗೌಡ ಬಿರೇದಾರ, ಶೇಖ ಹುಸೇನ ಒಂಟಿ, ಮಲ್ಕಯ್ಯ ತೇಲ್ಕರ್, ಹಣಮೇಗೌಡ ಪಾಟೀಲ ಭಾಗವಹಿಸಿದ್ದರು.

ಮಲ್ಲು ವಿಷ್ಣುಸೇನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಮ್ಮಣ್ಣ ದೇವಿಕೇರಿ ಸ್ವಾಗತಿಸಿದರು. ದತ್ತು ಮುದ್ನೂರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.