ADVERTISEMENT

ಸುರಪುರ: 1,145 ಪ್ರಕರಣ ಇತ್ಯರ್ಥ, ₹2.39 ಕೋಟಿ ಪರಿಹಾರ

ಸುರಪುರ: ರಾಷ್ಟ್ರೀಯ ಲೋಕ ಅದಾಲತ್

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 14:28 IST
Last Updated 14 ಡಿಸೆಂಬರ್ 2024, 14:28 IST
ಸುರಪುರದ ನ್ಯಾಯಾಲಯದಲ್ಲಿ ಹಿರಿಯ ಶ್ರೇಣಿಯ ನ್ಯಾಯಾಧೀಶೆ ಫಕೀರವ್ವ ಕೆಳಗೇರಿ ಅಧ್ಯಕ್ಷತೆಯಲ್ಲಿ ಶನಿವಾರ ರಾಷ್ಟ್ರಿಯ ಲೋಕ ಅದಾಲತ್ ನಡೆಯಿತು
ಸುರಪುರದ ನ್ಯಾಯಾಲಯದಲ್ಲಿ ಹಿರಿಯ ಶ್ರೇಣಿಯ ನ್ಯಾಯಾಧೀಶೆ ಫಕೀರವ್ವ ಕೆಳಗೇರಿ ಅಧ್ಯಕ್ಷತೆಯಲ್ಲಿ ಶನಿವಾರ ರಾಷ್ಟ್ರಿಯ ಲೋಕ ಅದಾಲತ್ ನಡೆಯಿತು   

ಸುರಪುರ: ‘ಇಲ್ಲಿಯ ನ್ಯಾಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ 1,145 ಪ್ರಕರಣ ಇತ್ಯರ್ಥ ಪಡಿಸಿ, ₹2,39,95,993 ಪರಿಹಾರ ಪಾವತಿಗೆ ಆದೇಶಿಸಲಾಗಿದೆ’ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶೆ ಫಕೀರವ್ವ ಕೆಳಗೇರಿ ತಿಳಿಸಿದರು.

‘ಅಪರಾಧ, ಚೆಕ್‍ಬೌನ್ಸ್, ಮೋಟಾರು ಅಪಘಾತ ಸೇರಿದಂತೆ ಕಿರಿಯ ಶ್ರೇಣಿ ನ್ಯಾಯಾಲಯದ 860, ಪ್ರಧಾನ ಸಿವಿಲ್ ನ್ಯಾಯಾಲಯದ 698, ಹೆಚ್ಚುವರಿ ಸಿವಿಲ್ ನ್ಯಾಯಾಲಯದ 931 ಸೇರಿ ಮೂರು ಕೋರ್ಟ್‌ಗಳಲ್ಲಿ ಒಟ್ಟು 2,489 ಪ್ರಕರಣಗಳನ್ನು ವಿಚಾರಣೆ ನಡೆಸಲಾಗಿತ್ತು’ ಎಂದರು.

‘ಲೋಕ ಅದಾಲತ್‍ನಲ್ಲಿ ಸೋಲು–ಗೆಲುವಿನ ಪ್ರಶ್ನೆಯೇ ಬರಲ್ಲ. ಎರಡು ಕಡೆಯ ಕಕ್ಷಿದಾರರಿಗೆ ನ್ಯಾಯ ಸಿಗುತ್ತದೆ. ಸಮಯ, ಹಣ ಎರಡೂ ಉಳಿಯುತ್ತದೆ. ಅಲೆದಾಟವೂ ತಪ್ಪುತ್ತದೆ. ಕಕ್ಷಿದಾರರಿಗೆ ನೆಮ್ಮದಿ ದೊರಕುತ್ತದೆ’ ಎಂದರು.

ADVERTISEMENT

ಹೆಚ್ಚುವರಿ ನ್ಯಾಯಾಧೀಶ ಬಸವರಾಜ ಅದಾಲತ್ ನಡೆಸಿದರು. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಜ್ಯೋತಿ ನಾಯಕ, ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಶರಣಬಸಪ್ಪ ಕೆ., ಹೆಚ್ಚುವರಿ ನ್ಯಾಯಾಲಯದಲ್ಲಿ ಸಂತೋಷಕುಮಾರ ಗಾರಂಪಳ್ಳಿ ಸಂಧಾನಕಾರರಾಗಿ ಕೆಲಸ ನಿರ್ವಹಿಸಿದರು.

ವಕೀಲರಾದ ಬಿ.ಎಚ್.ಕಿಲ್ಲೆದಾರ. ಜಿ.ಆರ್.ಬನ್ನಾಳ, ಮಹಮ್ಮದ್‌ ಹುಸೇನ್, ದೇವಿಂದ್ರಪ್ಪ ಬೇವಿನಕಟ್ಟಿ, ಮನೋಹರ ಕುಂಟೋಜಿ, ಛಾಯಾ ಕುಂಟೋಜಿ, ಮಂಜುನಾಥ ಹುದ್ದಾರ, ಆದಪ್ಪ ಹೊಸಮನಿ, ಸುರೇಂದ್ರ ದೊಡ್ಮನಿ, ಎಂ.ಎಂ.ಬಡಿಗೇರ, ಮಲ್ಲು ಬೋವಿ, ಹಯ್ಯಾಳಪ್ಪ ಕಿಲ್ಲೇದಾರ, ರವಿ ನಾಯಕ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.